ಐಸಿಐಸಿಐನ ಐಮೊಬೈಲ್ ಅಪ್ಲಿಕೇಶನ್ ಮುಖಾಂತರ ಬೇಕಾದ ಮಂದಿಗೆ ಹಣ ರವಾನೆ ಮಾಡಲಿಚ್ಛಿಸುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಾಕು.
ಹಂತ 1: ಐಸಿಐಸಿಐ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಿ.
ಹಂತ 2: ನಾಲ್ಕು ಅಂಕಿಯ ಪಿಐಎನ್ ಎಂಟರ್ ಮಾಡಿ.
ಹಂತ 3: fund transfer ಮೇಲೆ ಕ್ಲಿಕ್ ಮಾಡಿ.
ಹಂತ 4: ಇದಾದ ಬಳಿಕ ಪಾವತಿ ಮಾಡಬೇಕಾದವರ ಹೆಸರನ್ನು ಎಂಟರ್ ಮಾಡಿ. ಇದಕ್ಕಾಗಿ Add/ Manage Payee ಮೇಲೆ ಕ್ಲಿಕ್ ಮಾಡಿ.
ಹಂತ 5: ಪೇಯೀ ಖಾತೆ ಐಸಿಐಸಿಐ ಬ್ಯಾಂಕ್‌ನಲ್ಲಿದ್ದರೆ ICICI Bank ಆಯ್ಕೆ ಮಾಡಿ. ಇಲ್ಲವಾದಲ್ಲಿ Other Bank ಕ್ಲಿಕ್ ಮಾಡಿ.
ಹಂತ 6: ಇದಾದ ಬಳಿಕ ಪೇಯೀ ಖಾತೆ ವಿವರಗಳು ಹಾಗೂ ಐಎಫ್‌ಎಸ್‌ಸಿ ಕೋಡ್ ಎಂಟರ್ ಮಾಡಿ.
ಹಂತ 7: Proceed ಮೇಲೆ ಕ್ಲಿಕ್ ಮಾಡಿ.
ಹಂತ 8: ಬಳಿಕ ಓಟಿಪಿ ಎಂಟರ್ ಮಾಡಿ.
ಹಂತ 9: ಎಷ್ಟು ಮೊತ್ತ ಕಳುಹಿಸಬೇಕು ಎಂಟರ್ ಮಾಡಿ Proceed ಮೇಲೆ ಕ್ಲಿಕ್ ಮಾಡಿ.
ಹಂತ 10: ವ್ಯವಹಾರ ಖಾತ್ರಿ ಮಾಡಲು Confirm ಮೇಲೆ ಕ್ಲಿಕ್ ಮಾಡಿ.
ಹಂತ 11: ಮತ್ತೊಮ್ಮೆ ನಿಮ್ಮ ನಾಲ್ಕು ಅಂಕಿಯ ಪಿನ್ ಎಂಟರ್ ಮಾಡಿ.
ಒಂದು ವೇಳೆ ಪೇಯೀ ಖಾತೆ ಐಸಿಐಸಿಐ ಬ್ಯಾಂಕಿನಲ್ಲಿ ಇಲ್ಲದೇ ಇದ್ದರೆ:
ಹಂತ 1: ಪೇಯೀಗಳ ಪಟ್ಟಿಯಿಂದ ಪೇಯೀಯನ್ನು ಆಯ್ಕೆ ಮಾಡಿ.
ಹಂತ 2: ಪಾವತಿಸಬೇಕಾದ ಮೊತ್ತವನ್ನು ಎಂಟರ್ ಮಾಡಿ.
ಹಂತ 3: ವರ್ಗಾವಣೆಯ ಟೈಪ್ ಯಾವುದು ಎಂದು NEFT/RTGS/IMPSಗಳಲ್ಲಿ ಒಂದನ್ನು ಆಯ್ಕೆ ಮಾಡಿ.
ಹಂತ 4: Now and Later ನಡುವೆ ಆಯ್ಕೆ ಮಾಡಿ.
ಹಂತ 5: ಪಾವತಿ ವಿಧವನ್ನು ಎಂಟರ್ ಮಾಡಿ ಬಳಿಕ Confirm ಕ್ಲಿಕ್ ಮಾಡಿ.