ಭಾರತೀಯ ಜಿಮ್ನಾಸ್ಟ್ ಪ್ರಣತಿ ನಾಯಕ್ ಟೋಕಿಯೋ ಒಲಿಂಪಿಕ್ನಿಂದ ಬಹುಬೇಗನೇ ಔಟ್ ಆಗಿದ್ದಾರೆ. ಈ ಮೂಲಕ ಜಿಮ್ನಾಸ್ಟ್ ಪ್ರಣತಿ ನಾಯಕ್ಗೆ ಒಲಿಂಪಿಕ್ ಪದಕ ಕೈ ತಪ್ಪಿದಂತಾಗಿದೆ.
ಪ್ರಣತಿ ನಾಯಕ್ ಪಂದ್ಯದಿಂದ ಹೊರಬೀಳುತ್ತಿದ್ದಂತೆಯೇ ಪ್ರಣತಿ ಹಿಂದಿನ ಕೋಚ್ ಮಿನರಾ ಬೇಗಂ ಪ್ರಣತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪ್ರಣತಿ ಆಟದ ಬಗ್ಗೆ ಗಂಭೀರತೆಯನ್ನೇ ಹೊಂದಿರಲಿಲ್ಲ. ಪ್ರಣತಿಗೆ ಆಟ ಅನ್ನೋದು ಫೋಟೋ ತೆಗೆಸಿಕೊಳ್ಳಲು ಇರುವ ಅವಕಾಶ ಮಾತ್ರ ಆಗಿತ್ತು. ಕೇವಲ ಪ್ರಣತಿ ಮಾತ್ರವಲ್ಲದೇ ಆಕೆಯ ಈಗಿನ ಕೋಚ್ 27 ವರ್ಷದ ಲಖನ್ ಶರ್ಮಾ ಕೂಡ ಗಂಭೀರ ರೀತಿಯಲ್ಲಿ ವರ್ತಿಸುತ್ತಿರಲಿಲ್ಲ. ಈಕೆಗೆ 26 ವರ್ಷ, ಕೋಚ್ಗೆ 27 ವರ್ಷ. ನನಗೆ ಇಬ್ಬರಲ್ಲೂ ಆಟದ ಬಗ್ಗೆ ಗಂಭೀರತೆ ಕಂಡು ಬಂದೇ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಒಲಿಂಪಿಕ್ ಪಂದ್ಯಕ್ಕೂ ಕೇವಲ 2 ತಿಂಗಳ ಹಿಂದೆ ಮಿನಾರಾರನ್ನ ಪ್ರಣತಿಯ ಕೋಚ್ ಸ್ಥಾನದಿಂದ ತೆಗೆಯಲಾಗಿತ್ತು. ಇದಾದ ಬಳಿಕ ಅವರು ಪ್ರಧಾನಿ ಮೋದಿ ಹಾಗೂ ಪ್ರಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ವಿಚಾರವಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು.
ಪ್ರಣತಿಗೆ 8 ವರ್ಷ ಇದ್ದಾಗಿನಿಂದ ಮಿನಾರಾ ಅವರ ಕೋಚ್ ಆಗಿದ್ದರು. ಮಿನರಾ ಮಾರ್ಗದರ್ಶನದಲ್ಲಿ ಪ್ರಣತಿ ಸಾಕಷ್ಟು ಸ್ಪರ್ಧೆಯನ್ನು ಎದುರಿಸಿದ್ದರು. ಒಲಿಂಪಿಕ್ನಲ್ಲಿ ಪ್ರಣತಿ ಉತ್ತಮ ಪ್ರದರ್ಶನವನ್ನೇ ನೀಡಿಲ್ಲ. 27 ವರ್ಷದ ವ್ಯಕ್ತಿ ಪ್ರಣತಿಗೆ ತರಬೇತಿ ನೀಡಲು ಸರಿಯಾದವರಲ್ಲ. ಪ್ರತಿಯೊಂದು ವಿಭಾಗದಲ್ಲೂ ಪ್ರಣತಿ ಎಡವಿದ್ದಾರೆ ಎಂದು ಹೇಳಿದ್ದಾರೆ.