ಕೋವಿಡ್ ವೈರಸ್ ವಿರುದ್ಧ ಹೋರಾಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಹೆಸರನ್ನು ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡೋದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪದ್ಮ ಪ್ರಶಸ್ತಿಗಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಹೆಸರನ್ನು ಸಾರ್ವಜನಿಕರು padmaawards.delhi@gmail.com ಮೂಲಕ ಶಿಫಾರಸು ಮಾಡಬಹುದು ಎಂದು ಅವರು ಹೇಳಿದ್ರು.
ಕೋವಿಡ್ ಸಂಕಷ್ಟದಲ್ಲಿ ಹೋರಾಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಶ್ರಮವನ್ನ ಗುರುತಿಸಿ ಪದ್ಮ ಪ್ರಶಸ್ತಿಯನ್ನ ನೀಡುವ ಮೂಲಕ ನಾವು ಅವರ ಸೇವೆಗೆ ಕೃತಜ್ಞತೆ ಸಲ್ಲಿಸಬಹುದಾಗಿದೆ. ಜನರನ್ನು ಕೊರೊನಾದಿಂದ ಕಾಪಾಡಲು ಹೋಗಿ ಅನೇಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಜೀವ ತೆತ್ತಿದ್ದಾರೆ. ಇಡೀ ದೇಶ ವೈದ್ಯಲೋಕಕ್ಕೆ ಋಣಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ರು.