ಬೆಂಗಳೂರು: ಸಿಎಂ ಸ್ಥಾನಕ್ಕೆ ಹಲವರ ಹೆಸರು ಕೇಳಿಬಂದಿದ್ದು, ವರಿಷ್ಠರ ಅನುಮತಿಯೊಂದಿಗೆ ಯಡಿಯೂರಪ್ಪ ಅವರ ‘ಕೃಪೆ’ ಕೂಡ ಅಗತ್ಯವಾಗಿ ಬೇಕಾಗಿತ್ತು.
ವರಿಷ್ಠರು ಹಲವು ಹೆಸರುಗಳನ್ನು ಫೈನಲ್ ಮಾಡಿದ್ದರೂ ಅದಕ್ಕೆ ಯಡಿಯೂರಪ್ಪ ಸಹಮತ ವ್ಯಕ್ತಡಿಸಿರಲಿಲ್ಲ. ಸಂಘ ಕೆಲವು ಹೆಸರನ್ನು ಪರಿವಾರದ ನಾಯಕರು ಕೂಡ ಒಪ್ಪಿರಲಿಲ್ಲ. ಕೊನೆಗೆ ಬಿಜೆಪಿ ವರಿಷ್ಠರು, ಸಂಘಪರಿವಾರದ ನಾಯಕರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ವಸಮ್ಮತ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಬಸವರಾಜ ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸಿದ್ದು, ಗೋವಿಂದ ಕಾರಜೋಳ ಅನುಮೋದಿಸಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸರ್ವಸಮ್ಮತ ನಾಯಕನಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬಂದಿದ್ದರೂ, ಕೂಡ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲು ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಯಡಿಯೂರಪ್ಪ ಅವರೇ ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸಿದ್ದಾರೆನ್ನಲಾಗಿದೆ.