ಬೆಂಗಳೂರು: ಲಿಂಗಾಯಿತ ಸಮುದಾಯದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಅರವಿಂದ್ ಬೆಲ್ಲದ್ ಅವರಲ್ಲಿ ಒಬ್ಬರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದರೂ, ಹಲವರ ಹೆಸರು ಪರಿಗಣನೆಯಲ್ಲಿದೆ.
ಜಾತಿಗೆ ಒತ್ತು ನೀಡುವ ಬದಲು ಸಿದ್ಧಾಂತಕ್ಕೆ ಮನ್ನಣೆ ನೀಡಬೇಕೆಂಬ ಚರ್ಚೆ ಕೂಡ ನಡೆದು ಸಿಎಂ ಸ್ಥಾನಕ್ಕೆ ಅನೇಕರ ಹೆಸರನ್ನು ಪರಿಗಣಿಸಲಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್.ಎಸ್.ಎಸ್. ನಾಯಕ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಚರ್ಚೆ ನಡೆಸಿದ ಬಳಿಕ ಯಡಿಯೂರಪ್ಪ ಸಲಹೆಯನ್ನೂ ಪಡೆದು ಹೊಸ ಸಿಎಂ ಆಯ್ಕೆ ಮಾಡಲು ಮೂವರ ಹೆಸರನ್ನು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ.
ಬಿ.ಎಲ್. ಸಂತೋಷ್, ಸಿ.ಟಿ. ರವಿ, ಅವರ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದು, ಬಿಜೆಪಿ ವರಿಷ್ಠರು, ಸಂಘ ಪರಿವಾರ ಮತ್ತು ಸಿಎಂ ಯಡಿಯೂರಪ್ಪ ಅವರ ಅಭಿಪ್ರಾಯದಂತೆ ಒಮ್ಮತದ ನಿರ್ಧಾರದೊಂದಿಗೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಬಹುದಾದ ಸಾಧ್ಯತೆ ಇದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾಪಿಸಿ ಹೊಸ ಸಿಎಂ ಆಯ್ಕೆ ಮಾಡಲಾಗುತ್ತದೆ. ಶಾಸಕಾಂಗ ಪಕ್ಷದ ಸಭೆಗೆ ಮೊದಲೇ ನಾಯಕನ ಆಯ್ಕೆಯ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ. ವರಿಷ್ಠರು ಮುಂದಿನ ಸಿಎಂ ಆಯ್ಕೆಯನ್ನು ಈಗಾಗಲೇ ಫೈನಲ್ ಮಾಡಿದ್ದರೂ, ಔಪಚಾರಿಕವಾಗಿ ನೂತನ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.