ಬೇಕಾಗುವ ಸಾಮಾಗ್ರಿಗಳು: ಕಡಲೇಬೇಳೆ – 2 ಕಪ್, ಮೈದಾ – 1 ಕಪ್, ಸಕ್ಕರೆ – 2 ಕಪ್, ಏಲಕ್ಕಿ 3 ರಿಂದ 4
ಮಾಡುವ ವಿಧಾನ: ಕಡಲೇಬೇಳೆಯನ್ನು ಒಂದು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಬೇಯಿಸಿ. ಇನ್ನು ಕನಕ ರೆಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ 2 ಸ್ಪೂನ್ ನಷ್ಟು ಸಕ್ಕರೆ ಹಾಕಿ ಬಳಿಕ ಸ್ವಲ್ಪ ನೀರು ಹಾಕಿ ಸಕ್ಕರೆ ಕರಗಿಸಿ. ನಂತರ ಮೈದಾ ಹಾಕಿ ನೀರು ಹಾಕಿ ಮಿಕ್ಸ್ ಮಾಡಿ. ಚಪಾತಿ ಹದದಷ್ಟು ಗಟ್ಟಿ ಬೇಡ. ಕೈಯಲ್ಲಿ ಅಂಟುವ ರೀತಿ ಇರಲಿ. ಬಳಿಕ ಸ್ವಲ್ಪ ಎಣ್ಣೆ ಹಾಕಿ ತಿರುವಿ. ಪಾತ್ರೆಯನ್ನು ಹಾಗೆಯೇ ಇಟ್ಟು ಮುಚ್ಚಿಡಿ. 2 ಗಂಟೆಗಳ ಕಾಲ ಹಾಗೆಯೇ ಇಡಿ.
ಮೊಡವೆ ಕಲೆಯಿಂದಾಗಿ ಮುಖದ ಸೌಂದರ್ಯ ಕುಂದಿದೆಯಾ…..? ಇಲ್ಲಿದೆ ನೋಡಿ ʼಮನೆ ಮದ್ದುʼ
ಕಡಲೇಬೇಳೆ ಸರಿಯಾಗಿ ಬೆಂದ ಬಳಿಕ ಸೋಸಿ ತೆಗೆಯಿರಿ. 2 ಕಪ್ ಕಡಲೇಬೇಳೆಗೆ 2 ಕಪ್ ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ಮೇಲೆ ಸ್ಟೌ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ 5 ರಿಂದ 10 ನಿಮಿಷ ಕುದಿಸಿ. ಸ್ವಲ್ಪ ಬಿಸಿಯಿದ್ದಾಗಲೇ ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ಜೊತೆಗೆ ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಮಿಕ್ಸಿ ಬದಲು ಗ್ರೈಂಡರ್ ನಲ್ಲಿ ರುಬ್ಬಿದರೆ ಒಳ್ಳೆಯದು.. ಬಳಿಕ ಹೂರಣವನ್ನು ಉಂಡೆ ಮಾಡಿಟ್ಟುಕೊಳ್ಳಿ. ಬಳಿಕ ರೆಡಿ ಮಾಡಿರೋ ಮೈದಾ ಹಿಟ್ಟಿನ ಕನಕವನ್ನು ಉಂಡೆಯಂತೆ ತೆಗೆದುಕೊಳ್ಳಿ. ಬಳಿಕ ಚಪಾತಿ ಮಣೆಯಲ್ಲಿ ಹಿಟ್ಟು ಹಾಕಿ ಕನಕ ಕ್ಕೆ ಹೂರಣದ ಉಂಡೆ ಸೇರಿಸಿ ಮೆಲ್ಲನೆ ಲಟ್ಟಿಸಿ. ಬಳಿಕ ಸ್ಟೌವ್ ಮೇಲೆ ಇಟ್ಟ ಕಾವಲಿಗೆ ಹಾಕಿ ಸರಿಯಾಗಿ ಎರಡೂ ಕಡೆ ಬೇಯಿಸಿದರೆ ಕಡಲೇಬೇಳೆಹೋಳಿಗೆ ಸವಿಯಲು ಸಿದ್ಧ.