ಹಲವು ಮಂದಿಗೆ ಮದುವೆ ಅನ್ನೋದು ಜೀವನದ ಒಂದು ವಿಶೇಷ ಕ್ಷಣವಾಗಿದೆ. ವಿವಾಹದ ಕ್ಷಣಗಳನ್ನು ಹೆಚ್ಚು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ ಕೂಡ. ಕೆಲವರು ತಮ್ಮ ಜೋಡಿಯನ್ನು ಮೆಚ್ಚಿಸಲು ನೃತ್ಯ ಇಲ್ಲವೇ ಹಾಡು ಹಾಡುತ್ತಾರೆ. ಆದರೆ ಇಲ್ಲೊಬ್ಬ ವರ ತನ್ನ ವಧುವನ್ನು ಡಿಫರೆಂಟ್ ಆಗಿ ಮೆಚ್ಚಿಸಲು ಪ್ರಯತ್ನಿಸಿದ್ದಾನೆ. ಸದ್ಯ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಕೋವಿಡ್ ಪಾಸಿಟಿವ್ ತಾಯಂದಿರು ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಲು ವೈದ್ಯರ ಸಲಹೆ
ಹೌದು, ಇಲ್ಲೊಬ್ಬ ವರ ನೃತ್ಯದಿಂದ ಅಲ್ಲ, ತನ್ನ ಸುಂದರ ವಧುವಿಗಾಗಿ ಶಾಯರಿ ಹೇಳುವ ಮೂಲಕ ಮೆಚ್ಚಿಸಿದ್ದಾನೆ. ಒಟ್ಟಾರೆಯಾಗಿ ಈ ಅರ್ಥ ಕೊಡುವ, ‘’ಕೊರೆವ ಚಳಿಗೆ ನೀನಿಲ್ಲ. ನನ್ನ ದೇಹವಿಡೀ ನಿನ್ನನ್ನೇ ನೆನಪಿಸಿಕೊಳ್ಳುತ್ತಿದೆ. ನೀ ಇದ್ದಿದ್ರೆ ನನ್ನನ್ನು ಕಂಬಳಿಯಂತೆ ತಬ್ಬಿ ಬೆಚ್ಚಗಿಡಬಲ್ಲೆ ನೀನು. ಕತ್ತಲು ಕವಿದ ದಾರಿಯಲ್ಲಿ ಕಂದೀಲು ಹಿಡಿದು ನಡೆದವನಂತೆ ನೆನಪಾಗುತ್ತಿಯಾ ನೀನು. ನೀನು ನನ್ನ ಪಾಲಿಗೆ ಎಂದಿಗೂ ಒಂದು ಶಾಯರಿ ಇದ್ದಂತೆ’’ ಅಂತಾ ರೊಮ್ಯಾಂಟಿಕ್ ಆಗಿ ಕವನದ ಸಾಲು ಹೇಳಿದ್ದಾನೆ.
ವರನ ಶಾಯರಿ ಕೇಳಿದ ವಧುವು ನಾಚಿ ನೀರಾಗಿದ್ದಾಳೆ. ಅಲ್ಲದೆ ಚಪ್ಪಾಳೆ ತಟ್ಟಿ ವರನನ್ನು ಅಭಿನಂದಿಸಿದ್ದಾಳೆ.
https://www.instagram.com/reel/CRZF_njlx5P/?utm_source=ig_web_copy_link