ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯ್ ಚಾನುರನ್ನು ಅಭಿನಂದಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಆಕೆಗೆ ಎರಡು ಕೋಟಿ ರೂಪಾಯಿಗಳ ನಗದು ಉಡುಗೊರೆ ಹಾಗೂ ರೈಲ್ವೇಯಲ್ಲಿ ಕೆಲಸದಲ್ಲಿರುವ ಆಕೆಗೆ ಬಡ್ತಿ ಘೋಷಿಸಿದ್ದಾರೆ.
“ದೇಶಕ್ಕೆ ಕೀರ್ತಿ ತಂದಾಕೆಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಭಾರತೀಯ ರೈಲ್ವೇಗೆ ಸಂತಸವಾಗುತ್ತದೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಕೋಟ್ಯಂತರ ಮಂದಿಗೆ ಸ್ಪೂರ್ತಿಯಾಗಿರುವ ಮೀರಾಬಾಯಿಗೆ ಎರಡು ಕೋಟಿ ರೂ.ಗಳ ಇನಾಮು ಹಾಗೂ ಬಡ್ತಿಯನ್ನು ಘೋಷಿಸಲು ಹರ್ಷಿಸುತ್ತೇನೆ. ದೇಶಕ್ಕಾಗಿ ಗೆಲ್ಲುತ್ತಿರಿ !” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಕೇಂದ್ರಕ್ಕೆ ದೀದಿ ಶಾಕ್: ದೇಶದಲ್ಲೇ ಮೊದಲ ಬಾರಿಗೆ ‘ಪೆಗಾಸಸ್’ ತನಿಖೆಗೆ ಸಮಿತಿ ರಚನೆ
ಇದಕ್ಕೂ ಮುನ್ನ ಯುವಜನ ವ್ಯವಹಾರಗಳ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಾನುರನ್ನು ಸನ್ಮಾನಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಬಳಿಕ ಮೀರಾಬಾಯಿ ಹಾಗೂ ಆಕೆಯ ಕೋಚ್ ವಿಜಯ್ ಶರ್ಮಾ ಸೋಮವಾರ ದೆಹಲಿಗೆ ಮರಳಿದ್ದಾರೆ.