ಕಾನ್ಪುರ್: ಬ್ಲೂ ಫಿಲಂ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ ಉದ್ಯಮಿ ರಾಜ್ ಕುಂದ್ರಾ ಗೆ ಸೇರಿದ ಉತ್ತರಪ್ರದೇಶದ ಕಾನ್ಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ 2 ಖಾತೆಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ.
ರಾಜ್ ಕುಂದ್ರಾ ಪ್ರೊಡಕ್ಷನ್ ಕಂಪನಿಯನ್ನು ಅರವಿಂದ ಶ್ರೀವಾಸ್ತವ ನಿರ್ವಹಿಸುತ್ತಿದ್ದು, ಆತನ ಪತ್ನಿ ಹರ್ಷಿತಾ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಅರವಿಂದ ಶ್ರೀವಾಸ್ತವ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ರಾಜ್ ಕುಂದ್ರಾಗೆ ಸಂಬಂಧಿಸಿದ ಕಾನ್ಪುರ್ ಎಸ್ಬಿಐ ಶಾಖೆಯಲ್ಲಿನ ಎರಡು ಖಾತೆಗಳನ್ನು ನಿರ್ಬಂಧಿಸಲಾಗಿದೆ.
ಇನ್ನು ರಾಜ್ ಕುಂದ್ರಾ ಬ್ಲೂಫಿಲಂ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ನೌಕರರು ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ರಾಜ್ ಕುಂದ್ರಾ ಕೃತ್ಯಕ್ಕೆ ಸಂಬಂಧಿಸಿದಂತೆ ಹಲವು ಪುರಾವೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.