ಬಹುದಿನಗಳ ಅನಿಶ್ಚಿತತೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಿಎಂ ಪದವಿಯಲ್ಲಿ ಒಂದು ಅವಧಿ ಪೂರ್ಣಗೊಳಿಸುವುದರಿಂದ ವಂಚಿತರಾಗಿದ್ದಾರೆ.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬಿಜೆಪಿಯ ನಾಲ್ವರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. 2019ರ ಇದೇ ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈಗ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ದಿಢೀರ್ ತಯಾರಿಸಿ ಸೌತೆಕಾಯಿ, ತೊಂಡೆಕಾಯಿ ಹುಳಿ
ನಾಲ್ಕು ಬಾರಿ ರಾಜ್ಯದ ಸಿಎಂ ಆಗಿರುವ 78 ವರ್ಷದ ಯಡಿಯೂರಪ್ಪ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಸಿಎಂ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್, ತೀರಥ್ ಸಿಂಗ್ ರಾವತ್ ಹಾಗೂ ಅಸ್ಸಾಂನಲ್ಲಿ ಸರ್ಬನಂದ ಸೋನೋವಾಲ್ ಸಿಎಂ ಕುರ್ಚಿಯಿಂದ ಕೆಳಗಿಳಿದು ತಮ್ಮದೇ ಪಕ್ಷದ ಬೇರೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.