ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಅನ್ನೋದು ತೀರಾ ವೈಯಕ್ತಿಕವಾದ ವಿಚಾರವಾಗಿದೆ. ಅಲ್ಲದೇ ದಾಂಪತ್ಯ ಅನ್ನೋದು ಗಂಡ – ಹೆಂಡತಿ ನಡುವಿನ ತಿಳುವಳಿಕೆ, ನಂಬಿಕೆ ಹಾಗೂ ಪ್ರೀತಿಯ ಮೇಲೆ ಅವಲಂಭಿತವಾಗಿರುತ್ತದೆ. ಗಣಿತ ಶಾಸ್ತ್ರಜ್ಞರು ಈ ಬಗ್ಗೆ ಒಂದು ಸಿದ್ಧಾಂತವನ್ನ ತಯಾರು ಮಾಡಿದ್ದು ಇದರ ಪ್ರಕಾರ ನೀವು ವೈವಾಹಿಕ ಜೀವನದಲ್ಲಿ ಕಾಲಿಡಲು ಸೂಕ್ತ ಸಮಯ ಯಾವುದು ಅನ್ನೋದನ್ನ ಪ್ರತಿಪಾದಿಸಿದ್ದಾರೆ.
ಗಣಿತಜ್ಞರಾದ ಟಾಮ್ ಗ್ರಿಫಿತ್ಸ್ ಹಾಗೂ ಬ್ರಿಯಾನ್ ಕ್ರಿಶ್ಚಿಯನ್ ತಮ್ಮ ನೂತನ ಪುಸ್ತಕ ಅಲ್ಗಾರಿದಮ್ ಟು ಲಿವ್ ಬೈ ಎಂಬ ಪುಸ್ತಕದಲ್ಲಿ ಮದುವೆಯಾಗಲು ಸರಿಯಾದ ವಯಸ್ಸು 26 ಎಂದು ಹೇಳಿದ್ದಾರೆ.
ಈ ಸಿದ್ಧಾಂತವನ್ನ ವಿವಿಧ ವಿಷಯಗಳನ್ನ ಆಧರಿಸಿ ತಯಾರಿಸಲಾಗಿದೆ. ನಿಗದಿತ ಸಮಯದಲ್ಲಿ ಕೊಟ್ಟ ಕೆಲಸವನ್ನ 37 ಪ್ರತಿಶತ ಪೂರೈಸುವವರಾಗಿದ್ದರೆ ಅವರು ತಮ್ಮ ಜೀವನದ ನಿರ್ಧಾರವನ್ನ ಕೈಗೊಳ್ಳಲು ಅರ್ಹರಾಗಿದ್ದಾರೆ ಎನ್ನಲಾಗಿದೆ.
ಇನ್ನು ಮದುವೆ ವಿಚಾರವನ್ನ ಮಾತನಾಡೋದಾದ್ರೆ, ಒಬ್ಬ ವ್ಯಕ್ತಿ 18 ರಿಂದ 40 ವರ್ಷ ಪ್ರಾಯದ ನಡುವೆ ಮದುವೆಗೆ ಪ್ಲಾನ್ ಮಾಡುತ್ತಿದ್ದರೆ ಅವರಿಗೆ 22 ಸರಿಯಾದ ವರ್ಷವಾಗಿದೆ. ಏಕೆಂದರೆ ನೀವು 22 ವರ್ಷ ವಯಸ್ಸಿನಲ್ಲಿ 37 ಪ್ರತಿಶತ ಕಾರ್ಯ ಪೂರೈಸುವವರಾಗಿರುತ್ತೀರಿ.
26 ವರ್ಷಕ್ಕಿಂತ ಮೊದಲು ಮದುವೆಯಾದರೆ ಏನಾಗುತ್ತದೆ..?
ಗಣಿತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಯಾವ ವ್ಯಕ್ತಿಯು 26 ವರ್ಷಕ್ಕಿಂತ ಬೇಗ ಮದುವೆಯಾಗುತ್ತಾರೋ ಅವರು ವಾದವನ್ನ ಹೆಚ್ಚು ಮಾಡುತ್ತಾರಂತೆ. ಆದರೆ 2015ರಲ್ಲೂ ಉಠಾಹ್ದ ತಜ್ಞರು ಇದೇ ರೀತಿಯ ಅಧ್ಯಯನವೊಂದನ್ನ ಮಾಡಿದ್ದರು. ಈ ಅಧ್ಯಯನದ ಪ್ರಕಾರ 28 ರಿಂದ 32 ವರ್ಷ ಪ್ರಾಯವು ಸರಿಯಾದ ಮದುವೆ ವಯಸ್ಸು ಎಂದು ಹೇಳಲಾಗಿತ್ತು.