alex Certify ಮೈಮೇಲೆ ಚಿತ್ತಾರ ಬಿಡಿಸಿಕೊಂಡು ನಗ್ನ ದೇಹ ಪ್ರದರ್ಶಿಸಿದ ಮಾಡೆಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಮೇಲೆ ಚಿತ್ತಾರ ಬಿಡಿಸಿಕೊಂಡು ನಗ್ನ ದೇಹ ಪ್ರದರ್ಶಿಸಿದ ಮಾಡೆಲ್….!

ಭಾನುವಾರ ನೀವೇನಾದರೂ ನ್ಯೂಯಾರ್ಕ್​ನ ಯೂನಿಯನ್​ ಸ್ಕ್ವೇರ್​​ ಬಳಿ ಅಡ್ಡಾಡ್ಡಿದ್ದರೆ ಖಂಡಿತವಾಗಿಯೂ ನೀವು ಕೆಲ ಚಿತ್ರ ವಿಚಿತ್ರ ದೃಶ್ಯಗಳನ್ನ ಕಣ್ತುಂಬಿಕೊಂಡಿರೋದ್ರಲ್ಲಿ ಎರಡು ಮಾತಿಲ್ಲ. ಏಕೆಂದರೆ ಭಾನುವಾರ ಈ ಪ್ರದೇಶದಲ್ಲಿ ಅನೇಕರು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ..! ಅವರ ದೇಹದ ಮೇಲೆ ಹೂವು ಹಾಗೂ ನಕ್ಷತ್ರಗಳ ಚಿತ್ರವಿರುವ ಹಾಗೆ ಬಣ್ಣ ಬಳಿಯಲಾಗಿತ್ತು.

8ನೇ ವಾರ್ಷಿಕ ಎನ್​ವೈಸಿ ಬಾಡಿ ಪೇಂಟಿಂಗ್​ ದಿನವನ್ನ 26 ಮಂದಿ ಕಲಾವಿದರು ಹಾಗೂ 45 ಮಾಡೆಲ್​ಗಳು ಈ ರೀತಿ ಆಚರಿಸಿದ್ದಾರೆ. ದೇಹದ ಬಗ್ಗೆ ಸಕಾರಾತ್ಮಕ ವಿಚಾರವನ್ನ ಶೇರ್​ ಮಾಡುವ ಸಲುವಾಗಿ ಬೆತ್ತಲೆ ದೇಹದ ಮೇಲೆ ಬಣ್ಣ ಬಳಿದುಕೊಂಡಿದ್ದಾರೆ.

ಕಲಾವಿದರ ಆಲೋಚನೆ ಹಾಗೂ ಎಲ್ಲಾ ಮಾದರಿಯ ದೇಹಗಳನ್ನ ಮುಕ್ತ ಅಭಿವ್ಯಕ್ತಿಯಿಂದ ಸ್ವೀಕರಿಸೋದನ್ನ ಉತ್ತೇಜಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಕಾರ್ಯಕ್ರಮದ ಮುಖ್ಯ ಸಂಘಟಕ ಹಾಗೂ ಕಲಾವಿದ ಆಂಡಿ ಗೊಲುಬ್​ ಹೇಳಿದ್ರು.

ಇದು ಮಾತ್ರವಲ್ಲದೇ ಬರೋಬ್ಬರಿ ಒಂದು ವರ್ಷಕ್ಕೂ ಅಧಿಕ ಕಾಲದ ನಿರ್ಬಂಧದ ಬಳಿಕ ನ್ಯೂಯಾರ್ಕ್, ಮಾರಕ ಕೊರೊನಾ ವೈರಸ್​ನಿಂದ ಚೇತರಿಸಿಕೊಳ್ತಿರೋದನ್ನ ಸಂಭ್ರಮಿಸುವ ಸಲುವಾಗಿಯೂ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...