ತಮ್ಮಿಬ್ಬರ ಮಧ್ಯೆ ಯಾರು ಬರುವುದನ್ನೂ ದಂಪತಿ ಸಹಿಸುವುದಿಲ್ಲ. ಮಕ್ಕಳು, ತಂದೆ – ತಾಯಿಯನ್ನೂ ಈ ವಿಷ್ಯದಲ್ಲಿ ದೂರವಿಡ್ತಾರೆ. ಪರಸ್ತ್ರೀ ಅಥವಾ ಪರಪುರುಷರಂತೂ ಅಸಾಧ್ಯವಾದ ಮಾತು. ಆದ್ರೆ ಇಲ್ಲೊಂದು ಜೋಡಿ ತಮ್ಮಿಬ್ಬರ ಮಧ್ಯೆ ಹುಡುಗಿಯೊಬ್ಬಳ ಅವಶ್ಯಕತೆಯಿದೆ ಎನ್ನುತ್ತಿದೆ.
ಹೌದು, ಜೆಸ್ಸಿಕಾ ಟಿ.ಎಲ್. ಬ್ರೂಕ್ಸ್ ಮತ್ತು ಅವರ ಪತಿ ಜೆಂಟ್ರಲ್ ಬ್ರೂಕ್ಸ್ಗೆ ಗರ್ಲ್ ಫ್ರೆಂಡ್ ಒಬ್ಬಳು ಬೇಕಂತೆ. ಇಬ್ಬರು 7 ವರ್ಷಗಳಿಂದ ಒಟ್ಟಿಗಿದ್ದಾರೆ. 4 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಈಗ ಇಬ್ಬರಿಗೂ ಗರ್ಲ್ ಫ್ರೆಂಡ್ ಬೇಕಾಗಿದೆಯಂತೆ. ಆಕೆ ಇಬ್ಬರ ಜೊತೆ ಲೈಂಗಿಕವಾಗಿಯೂ ಆಕ್ಟಿವ್ ಆಗಿರಬೇಕಂತೆ.
ಜೆಸ್ಸಿಕಾ ಒಂದು ಮಗುವಿನ ತಾಯಿ. ಪತಿ ಟ್ರಕ್ ಡ್ರೈವರ್. ಮನೆಯಲ್ಲಿ ಇನ್ನೊಬ್ಬ ವ್ಯಕ್ತಿಯ ಅವಶ್ಯಕತೆಯಿದೆ ಎಂಬುದನ್ನು ಇಬ್ಬರೂ ಅರಿತಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಹುಡುಗಿ ಹುಡುಕುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಪ್ಲಾನ್ ಸಿದ್ಧಪಡಿಸಿದ್ದು, ಕೆಲ ಒಪ್ಪಂದದ ನಂತ್ರ ಒಟ್ಟಿಗಿರಲಿದ್ದಾರೆ. ಇದನ್ನು Polyamory ಸಂಬಂಧವೆಂದು ಕರೆಯಲಾಗುತ್ತದೆ. ಈ ಸಂಬಂಧಕ್ಕೆ ಇಬ್ಬರ ಒಪ್ಪಿಗೆಯಿದೆ. ಆದ್ರೆ ಇನ್ನೂ ಹುಡುಗಿ ಸಿಕ್ಕಿಲ್ಲ. ಗಂಡನ ಒತ್ತಡಕ್ಕೆ ಜೆಸ್ಸಿಕಾ ಹೀಗೆ ಮಾಡ್ತಿದ್ದಾಳೆಂದು ಕೆಲವರು ಹೇಳಿದ್ದರು. ಆದ್ರೆ ಜೆಸ್ಸಿಕಾ ಇದನ್ನು ತಳ್ಳಿ ಹಾಕಿದ್ದಾಳೆ. ನಮ್ಮಿಬ್ಬರ ಮಧ್ಯೆ ಸಂಬಂಧ ಗಟ್ಟಿಯಾಗಿದೆ ಎಂದವಳು ತಿಳಿಸಿದ್ದಾರೆ.