alex Certify ವಿಜಯ್‌ ದಿವಸ್‌ ವಿಶೇಷ: ಕಾರ್ಗಿಲ್​ ವೀರ ವಿಕ್ರಮ್​ ಭಾತ್ರಾ ಜೊತೆಗಿನ ಮಧುರ ಕ್ಷಣಗಳನ್ನ ನೆನೆದ ಪತ್ನಿ ಡಿಂಪಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯ್‌ ದಿವಸ್‌ ವಿಶೇಷ: ಕಾರ್ಗಿಲ್​ ವೀರ ವಿಕ್ರಮ್​ ಭಾತ್ರಾ ಜೊತೆಗಿನ ಮಧುರ ಕ್ಷಣಗಳನ್ನ ನೆನೆದ ಪತ್ನಿ ಡಿಂಪಲ್

ಹುತಾತ್ಮ ವೀರ ಕ್ಯಾಪ್ಟನ್​ ವಿಕ್ರಮ್​ ಭಾತ್ರಾ ಧೈರ್ಯ ಹಾಗೂ ಸ್ಪೂರ್ತಿಯ ಸಾಕಾರ ಮೂರ್ತಿ ಎಂದು ಹೇಳಿದರೆ ತಪ್ಪಾಗಲಾರದು. ಯುದ್ಧ ಭೂಮಿಯಲ್ಲಿ ಪ್ರಾಣದ ಹಂಗನ್ನ ತೊರೆದು ಹೋರಾಡಿದ ಈ ಯೋಧನ ಶೌರ್ಯ ದೇಶಕ್ಕೆ ಮಾದರಿಯಾದರೆ ಪತ್ನಿ ಡಿಂಪಲ್​ ಚೀಮಾ ಮೇಲೆ ಅವರಿಗಿದ್ಧ ಪ್ರೀತಿ ಕತೆ ಕೂಡ ಸ್ಪೂರ್ತಿದಾಯಕವಾಗಿದೆ.

ಕ್ಯಾಪ್ಟನ್​​ ಬಾತ್ರಾ 1999ರಲ್ಲಿ ಕಾರ್ಗಿಲ್​ ಸಂಘರ್ಷದ ಸಂದರ್ಭದಲ್ಲಿ 16000 ಅಡಿ ಎತ್ತರದಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದರು.
ಡಿಂಪಲ್​ ಚೀಮಾ ಹಾಗೂ ವಿಕ್ರಮ್​ 1995ರಲ್ಲಿ ಚಂಡೀಘಡ್​​ನ ಪಂಜಾಬ್​ ವಿಶ್ವವಿದ್ಯಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಬ್ಬರೂ ಇದೇ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್​ ಮಾಸ್ಟರ್​ ಡಿಗ್ರಿ ವ್ಯಾಸಂಗಕ್ಕೆ ದಾಖಲಾತಿ ಮಾಡಿದ್ದರು.

ಆದರೆ ಇಬ್ಬರಿಗೂ ಈ ಉನ್ನತ ಪದವಿಯನ್ನ ಕಾರಣಾಂತರಗಳಿಂದ ಪೂರೈಸಲು ಸಾಧ್ಯವಾಗಲಿಲ್ಲ. ಆದರೆ ವಿಧಿ ಅವರನ್ನ ಜೀವಮಾನ ಪೂರ್ತಿ ಒಟ್ಟಾಗಿ ಬಾಳುವಂತೆ ಮಾಡಿತ್ತು. 1996ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗುತ್ತಿದ್ದಂತೆಯೇ ವಿಕ್ರಮ್​ ಅತ್ಯಂತ ಸಂತೋಷವಾಗಿದ್ದರು ಎಂದು ಹೇಳುವ ಮೂಲಕ ಡಿಂಪಲ್​ ಹಳೆಯ ದಿನಗಳನ್ನ ಜ್ಞಾಪಿಸಿಕೊಂಡರು.

ಈ ಜೋಡಿ ಯಾವಾಗಲೂ ಗುರುದ್ವಾರದ ಶ್ರೀ ನಾಡಾ ಸಾಹೇಬ್​ ಹಾಗೂ ಮಾನಸಾ ದೇವಿ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ದೇವರಿಗೆ ಸುತ್ತು ಪೂರೈಸಿದ ಬಳಿಕ ಅವರು ನನ್ನ ಬಳಿ ಶುಭಾಶಯಗಳು ಶ್ರೀಮತಿ ಭಾತ್ರಾ ಎಂದು ಹೇಳಿದ್ದರು. ಮದುವೆ ದಿನಗಳನ್ನ ಜ್ಞಾಪಿಸುತ್ತಾ ಇನ್ನೊಂದು ಘಟನೆಯನ್ನ ಡಿಂಪಲ್​ ಶೇರ್​ ಮಾಡಿದ್ದಾರೆ. ವಿಕ್ರಮ್​ ತಮ್ಮ ಪರ್ಸ್​ನಲ್ಲಿದ್ದ ಬ್ಲೇಡಿನಿಂದ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಆ ರಕ್ತದಿಂದ ಡಿಂಪಲ್​ ಹಣೆಗೆ ಸಿಂಧೂರವನ್ನಿಟ್ಟಿದ್ದರಂತೆ..! ಇದು ನನ್ನ ಜೀವನದ ಅತೀ ಮಧುರ ಕ್ಷಣ ಅಂತಾರೆ ಡಿಂಪಲ್​..! ವಿಕ್ರಮ್​ ಹುತಾತ್ಮರಾದ ಬಳಿಕ ಡಿಂಪಲ್ ಎರಡನೇ ಮದುವೆಯಾಗಿಲ್ಲ.

ಶೇರ್​ ಶಾ ಎಂಬ ಹೆಸರನ್ನೂ ಹೊಂದಿರುವ ವಿಕ್ರಮ್​ ಭಾತ್ರಾ 1999ರ ಜುಲೈ 7ರಂದು ಹುತಾತ್ಮರಾಗಿದ್ದಾರೆ. ಯೇ ದಿಲ್​ ಮಾಂಗೆ ಮೋರ್​ ಎಂಬ ಮಾತನ್ನ ಅವರು ಯುದ್ಧ ಘೋಷವಾಕ್ಯ ಮಾಡಿಕೊಂಡಿದ್ದರು. ಇದು ಸಖತ್​ ವೈರಲ್​ ಕೂಡ ಆಗಿತ್ತು. ಕಾರ್ಗಿಲ್​ ಯುದ್ಧದ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ವಿಕ್ರಮ್​ಗೆ ಭಾರತ ಸರ್ಕಾರ ಅತ್ಯುನ್ನತ ಪರಮ ವೀರ ಚಕ್ರ ನೀಡಿ ಗೌರವಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...