ಆಗಸ್ಟ್-ಸೆಪ್ಟೆಂಬರ್‌ನಲ್ಲಿ 28%ನಷ್ಟು ದೇಶವಾಸಿಗಳು ಹಬ್ಬಗಳನ್ನು ಆಚರಿಸಲು ದೇಶಾದ್ಯಂತ ಟ್ರಾವೆಲ್ ಮಾಡುವ ಪ್ಲಾನ್ ಇಟ್ಟುಕೊಂಡಿರುವ ಕಾರಣ ಕೋವಿಡ್ ಸೋಂಕಿನ ಮೂರನೇ ಅಲೆಯ ರಿಸ್ಕ್ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಏಪ್ರಿಲ್ 12ರಂದು ಬಿಡುಗಡೆ ಮಾಡಿದ್ದ ತನ್ನ ಹಿಂದಿನ ಸರ್ವೆಯೊಂದರ ಮೂಲಕ ಕೋವಿಡ್ ಎರಡನೇ ಅಲೆಯ ರಿಸ್ಕ್ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿದ್ದ ತಾನು ಈ ಬಗ್ಗೆ ಸರ್ಕಾರಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾಗಿ ಲೋಕಲ್ ಸರ್ಕಲ್ಸ್ ಹೆಸರಿನ ಆನ್ಲೈನ್ ಪೋರ್ಟಲ್ ಒಂದು ಹೇಳಿಕೊಂಡಿದೆ.
ಕೋವಿಡ್ ಮೂರನೇ ಅಲೆಯ ರಿಸ್ಕ್ ಅನ್ನು ಅಂದಾಜಿಸಲು ಮುಂದಾಗಿರುವ ಲೋಕಲ್ ಸರ್ಕಲ್ಸ್, ಮುಂಬರುವ ತಿಂಗಳುಗಳಲ್ಲಿ ಜನರು ಹೆಚ್ಚಾಗಿ ಸಂಚಾರ ಮಾಡುವ ವಿಚಾರವಾಗಿ 311 ಜಿಲ್ಲೆಗಳ 18,000ಕ್ಕೂ ಹೆಚ್ಚು ನಾಗರಿಕರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ.
ಪೊಲೀಸ್ ಅಧಿಕಾರಿಯಿಂದಲೇ ಘೋರ ಕೃತ್ಯ
ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ತಮಗೆ ಯಾವುದೇ ಟ್ರಾವೆಲಿಂಗ್ ಪ್ಲಾನ್‌ಗಳಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗಿಯಾದ 62%ನಷ್ಟು ಮಂದಿ ತಿಳಿಸಿದ್ದಾರೆ. ಇದೇ ವೇಳೆ ಟ್ರಾವೆಲಿಂಗ್ ಪ್ಲಾನ್ ಇರುವುದಾಗಿ 28% ಮಂದಿ ಹೇಳಿಕೊಂಡಿದ್ದಾರೆ.
ಈ ಅವಧಿಯಲ್ಲಿ ದೇಶದ ಬಹಳಷ್ಟು ಜಾಗಗಳಲ್ಲಿ ರಜೆ ಇರುವ ಕಾರಣದಿಂದಾಗಿ ಟ್ರಾವೆಲಿಂಗ್ ಚಟುವಟಿಕೆ ಹೆಚ್ಚಾಗಿರುತ್ತದೆ ಎಂದು ತಿಳಿಸಿರುವ ಲೋಕಲ್ ಸರ್ಕಲ್ಸ್, ವಾರಾಂತ್ಯಗಳೊಂದಿಗೆ ಈ ರಜೆಗಳನ್ನು ಕ್ಲಬ್ ಮಾಡಿಕೊಳ್ಳುವ ಪ್ಲಾನ್ ಅನ್ನು ಬಹಳಷ್ಟು ಮಂದಿ ಇಟ್ಟುಕೊಂಡಿರಲಿದ್ದಾರೆ ಎಂದು ತಿಳಿಸಿದೆ.