alex Certify ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ

ಒಂದೂವರೆ ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದ ತನ್ನ ಮಡದಿಯನ್ನು ಕೊಲೆ ಮಾಡಿದ ಆಪಾದನೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್‌ನಲ್ಲಿ ಬಂಧಿಸಲಾಗಿದೆ.

ಮಡದಿಯ ದೇಹವನ್ನು ಸಹಾಯಕನೊಬ್ಬನ ನೆರವಿನಿಂದ ಸುಟ್ಟು ಹಾಕಿರುವ ಈ ಪೊಲೀಸ್ ಅಧಿಕಾರಿಗೆ ಕಾಂಗ್ರೆಸ್ ನಾಯಕ ಕೀರ್ತಿಸಿಂಗ್ ಜಡೇಜಾ ಸಹ ನೆರವಾಗಿರುವ ಆರೋಪದಲ್ಲಿ ಬಂಧಿಸಲಾಗಿದೆ. 2020ರಲ್ಲಿ ಕರ್ಜನ್ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಫರ್ಧಿಸಿದ್ದ ಜಡೇಜಾ ಸೋಲು ಕಂಡಿದ್ದರು.

ಓಲಾ ವಿದ್ಯುತ್‌ ಚಾಲಿತ ಸ್ಕೂಟರ್‌ ವೇಗದ ಕುರಿತು ಈ ಪ್ರಶ್ನೆ ಮುಂದಿಟ್ಟ ಸಿಇಓ

“ಜೂನ್ 4-5ರ ಮಧ್ಯರಾತ್ರಿಯಲ್ಲಿ ತಮ್ಮ ಮಡದಿ ಸ್ವೀಟಿ ಪಟೇಲ್‌ರನ್ನು ಕೊಂದ ಆರೋಪದ ಮೇಲೆ ವಡೋದರಾ ಗ್ರಾಮಾಂತರ ಪೊಲೀಸ್‌ ನಿರೀಕ್ಷಕ ಅಜಯ್ ದೇಸಾಯಿರನ್ನು ಬಂಧಿಸಲಾಗಿದೆ. ಬಳಿಕ ಪಕ್ಕದ ಭಾರುಚ್‌ ಜಿಲ್ಲೆಯ ಅಟಲಿ ಗ್ರಾಮದಲ್ಲಿ ದಹೇಜ್ ಹೆದ್ದಾರಿಯಲ್ಲಿ ಆಕೆಯ ದೇಹವನ್ನು ಜಡೇಜಾ ಮಾಲೀಕತ್ವದಲ್ಲಿ ನಿರ್ಮಾಣವಾಗುತ್ತಿರುವ ಹೊಟೇಲ್‌ ಒಂದರಲ್ಲಿ ಸುಟ್ಟು ಹಾಕಲಾಗಿದೆ. ದೇಸಾಯಿ ಹಾಗೂ ಜಡೇಜಾ ವಿರುದ್ಧ ಕೊಲೆ ಹಾಗೂ ಸಾಕ್ಷಿ ನಾಶದ ಮತ್ತು ಇತರೆ ಆಪಾದನೆಗಳ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಕರ್ಜನ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ” ಎಂದು ಅಹಮದಾಬಾದ್ ಕ್ರೈಂ ಬ್ರಾಂಚ್‌‌ನ ನಿರೀಕ್ಷಕ ಡಿಬಿ ಬರದ್‌ ತಿಳಿಸಿದ್ದಾರೆ.

ಜೂನ್ 4-5ರ ಮಧ್ಯರಾತ್ರಿ ತನ್ನೊಂದಿಗೆ ಜಗಳವಾಡಿದ ಮಡದಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ದೇಸಾಯಿ, ಆಕೆಯ ದೇಹವನ್ನು ಜೂನ್ 5ರ ಮುಂಜಾನೆ ಬ್ಲಾಂಕೆಟ್ ಒಂದರಿಂದ ಮುಚ್ಚಿ ತನ್ನ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಇದಾದ ಬಳಿಕ, ಬೆಳಿಗ್ಗೆ 11:30ರ ವೇಳೆಗೆ ತನ್ನ ಮಡದಿಯು ಜಗಳವಾಡಿಕೊಂಡು ಎಲ್ಲೋ ಹೋಗಿದ್ದು ಮಿಸ್ಸಿಂಗ್ ಆಗಿರುವುದಾಗಿ ದೇಸಾಯಿ ತನ್ನ ಸಹೋದರನಿಗೆ ತಿಳಿಸಿದ್ದಾನೆ. ಇದಾದ ಬಳಿಕ ಜಡೇಜಾ ಸಹಾಯ ಪಡೆದ ದೇಸಾಯಿ ಆಕೆಯ ದೇಹವನ್ನು ಜಡೇಜಾರ ಹೊಟೇಲ್ ಕಟ್ಟಡದ ಬಳಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ಪ್ರಕಟಣೆಯಿಂದ ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...