ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಎರಡು ವರ್ಷ ಪೂರೈಸಿದ್ದು, ಸವಾಲುಗಳ ನಡುವೆ ಇಂದು ಸಂಭ್ರಮಾಚರಣೆ ನಡೆಯಲಿದೆ.
ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಕಮಲ ಪಾಳಯ ಇದ್ದು, ಇಂದು ಸರ್ಕಾರದ ಸಾಧನೆಯ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ವರಿಷ್ಠರಿಂದ ಯಾವುದೇ ಸಂದೇಶ ಬಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದ್ಯಕ್ಕೆ ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾನುವಾರ ಸಂಜೆಯೊಳಗೆ ಸಂದೇಶ ಬರಬಹುದೆಂದು ಹೇಳಲಾಗಿತ್ತು. ಸೋಮವಾರ ಕೂಡ ಸಂದೇಶದ ನಿರೀಕ್ಷೆಯಲ್ಲಿ ಸಿಎಂ ಇದ್ದಾರೆ. ಇದೆಲ್ಲದರ ನಡುವೆ ಸರ್ಕಾರದ ಸಾಧನೆಯ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿ, ಮಧ್ಯಾಹ್ನದ ನಂತರ ಕಾರವಾರಕ್ಕೆ ತೆರಳಲಿದ್ದಾರೆ. ಕೊನೆ ಕ್ಷಣದವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ಸಿಎಂ ಹೇಳಿದ್ದು, ಸೋಮವಾರವೂ ಸಂದೇಶ ಬಾರದಿದ್ದರೆ ಯಡಿಯೂರಪ್ಪ ಸದ್ಯಕ್ಕೆ ಅವರು ಸೇಫ್ ಆಗಲಿದ್ದಾರೆ ಎಂದು ಹೇಳಲಾಗಿದೆ.