ದೇಶದಲ್ಲಿ ಘಟಿಸುವ ದೊಡ್ಡ ವಿದ್ಯಮಾನಗಳ ಕುರಿತಂತೆ ಮರಳಿನ ಕಲಾಕೃತಿಯನ್ನು ರಚಿಸಿ ಜನಮನ ಸೆಳೆಯುತ್ತಾ ಬಂದಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಇದೀಗ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನುರ ಕಲಾಕೃತಿ ರಚಿಸಿದ್ದಾರೆ.
ಟೋಕಿಯೋ 2020 ಒಲಿಂಪಿಕ್ಸ್‌ನ ತೂಕ ಎತ್ತುವ ಸ್ಫರ್ಧೆಯಲ್ಲಿ, 110 & 115 ಕೆಜಿ ತೂಕ ಎತ್ತಿ ದೇಶಕ್ಕೆ ಬೆಳ್ಳಿ ಪದಕ ತಂದಿತ್ತ ಚಾನುರ ಯಶಸ್ಸಿಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. 2000ದಲ್ಲಿ ಸಿಡ್ನಿಯಲ್ಲಿ ಆಯೋಜಿಸಿದ್ದ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್ ಸ್ಫರ್ಧೆಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಈ ಸಾಲಿನಲ್ಲಿ ಭಾರತಕ್ಕೆ ಪದಕ ದೊರೆತಿದೆ.
ರಾಯಲ್ ಎನ್‌ಫೀಲ್ಡ್ ಬ್ರಾಂಡ್ ಅಡಿ ಬರಲಿವೆಯೇ ವಿದ್ಯುತ್ ಚಾಲಿತ ಬೈಕುಗಳು…..?
ಪುರಿ ಕಡಲ ತೀರದಲ್ಲಿ ಮರಳು ಕಲಾಕೃತಿ ರಚಿಸುವ ಮೂಲಕ ಪಟ್ನಾಯಕ್ ಅವರು ಚಾನುಗೆ ಗೌರವ ಸಲ್ಲಿಸಿದ್ದಾರೆ.