ಮದುವೆ ಗಂಡನ್ನು ಕುದುರೆ ಮೇಲೆ ಕೂರಿಸಿಕೊಂಡು ಬರುವ ಉತ್ತರ ಭಾರತೀಯ ಸಂಪ್ರದಾಯ ಭಾರೀ ಫೇಮಸ್. ಪಟಾಕಿಗಳನ್ನು ಸಿಡಿಸುತ್ತಾ ವರನನ್ನು ಭಾರೀ ಮೆರವಣಿಗೆಯ ಮೂಲಕ ಸ್ವಾಗತಿಸುವುದು ಈ ಶಾಸ್ತ್ರದ ಪ್ರಮುಖ ಆಕರ್ಷಣೆ.
ರಾಜಸ್ಥಾನದಲ್ಲಿ ನಡೆದ ಇಂಥದ್ದೇ ಒಂದು ಮದುವೆ ಮೆರವಣಿಗೆ ಸಮಾರಂಭದಲ್ಲಿ ಮದುಮಗನ ಬರಾತ್ ಮೆರವಣಿಗೆ ವೇಳೆ ಪಟಾಕಿಗಳ ಸಿಡಿತಕ್ಕೆ ಬೆಚ್ಚಿದ ಕುದುರೆ ವರನನ್ನು ತನ್ನ ಮೇಲೆ ಕೂರಿಸಿಕೊಂಡೇ ಅಲ್ಲಿಂದ ಕಾಲ್ಕಿತ್ತಿರುವ ವಿಡಿಯೋ ವೈರಲ್ ಆಗಿದೆ.
ಅಜ್ಮೇರ್ ಜಿಲ್ಲೆಯ ನಾಸಿರಾಬಾದ್ ಪಟ್ಟಣದ ಬಳಿಯ ರಾಂಪುರ ಗ್ರಾಮದಲ್ಲಿ ಘಟಿಸಿದ ಈ ಮೆರವಣಿಗೆಯ ವಿಡಿಯೋ ವೈರಲ್ ಆಗಿದ್ದು, ಮದುಮಗನ ಪಾಡನ್ನು ಕಂಡ ನೆಟ್ಟಿಗರು ನಕ್ಕೂ ನಕ್ಕೂ ಇಟ್ಟಿದ್ದಾರೆ.