ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ 3ನೇ ಅಲೆ ಭೀತಿ ಆರಂಭವಾಗಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಮೂರನೇ ಅಲೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಲವು ದೇಶಗಳಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಕೂಡ ಶುರುವಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದು, ಭಾರಿ ಮಳೆ, ಪ್ರವಾಹಗಳ ನಡುವೆ ಭಾರತದಲ್ಲಿ ಕೂಡ ಕೊರೊನಾ ಮತ್ತೊಂದು ಅಲೆ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನಿಜಕ್ಕೂ ಕೊರೊನಾ ಮೂರನೇ ಅಲೆ ಆರಂಭವಾಗಲಿದೆಯೇ ? ಇಂತಹ ಆತಂಕಕ್ಕೆ ಕಾರಣವಾದರೂ ಏನು ? ಕೋವಿಡ್ 3ನೇ ಅಲೆ ಎಂದರೇನು ? ಜನ ಸಾಮಾನ್ಯರು ತಿಳಿದುಕೊಳ್ಳಲೇ ಬೇಕಾದ ಅಗತ್ಯ ಮಾಹಿತಿಯೊಂದನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಪದಗಳೇ ಸಿಗುತ್ತಿಲ್ಲ… ಪದಕ ಗೆದ್ದ ಖುಷಿಯಲ್ಲಿ ಮೀರಾಬಾಯಿ ಚಾನು ಪ್ರತಿಕ್ರಿಯೆ
ಯಾವುದೇ ಸಾಂಕ್ರಾಮಿಕ ರೋಗದ ಅಲೆ ಎಂಬುದು ಪ್ರಕೃತಿ ಸೃಷ್ಟಿ ಅಲ್ಲ, ಇದೊಂದು ಜನರ ಸೃಷ್ಟಿ. ಈಗಾಗಲೇ ಶೇ.80ರಷ್ಟು ಜನರು ಇನ್ಫೆಕ್ಟ್ ಆಗಿದ್ದು, ಇನ್ನುಳಿದ ಶೇ.20ರಷ್ಟು ಜನರಲ್ಲಿ ಹರ್ಡ್ ಇಮ್ಯುನಿಟಿ ಬಂದಿದ್ದು, ಕೋವಿಡ್ ವಿರುದ್ಧ ಹೋರಾಡುವ ಶಕ್ತಿ ಜನರಲ್ಲಿ ಬಂದಿದೆ. ಹಾಗಾಗಿ ಭಾರತದಲ್ಲಿ ಮೂರನೇ ಅಲೆ ಎಂಬುದು ಸಾಧ್ಯವಿಲ್ಲ ಎಂದು ಡಾ. ರಾಜು ಅಭಿಪ್ರಾಯಪಟ್ಟಿದ್ದಾರೆ. ಡಾ. ರಾಜು ಅವರ ಈ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ