ಒಲಂಪಿಕ್ ಆಟಗಾರ್ತಿ ಜೊತೆ ಡೇಟಿಂಗ್ ಮಾಡಲು ಭರ್ಜರಿ ಪ್ಲಾನ್ ಮಾಡಿದ ಭೂಪ….! 24-07-2021 11:42AM IST / No Comments / Posted In: Latest News, Live News, Sports ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡೋತ್ಸವ ರಂಗೇರಿದೆ. ಒಂದು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಒಲಿಂಪಿಕ್ ಕ್ರೀಡಾ ಜ್ವಾಲೆ ಪ್ರಜ್ವಲಿಸಿದೆ. ಕೊರೊನಾ ಸಂಕಷ್ಟದ ನಡುವೆಯೂ ಹೊಸ ಉತ್ಸಾಹವನ್ನ ತುಂಬುತ್ತಿರುವ ಈ ಬಾರಿಯ ಒಲಿಂಪಿಕ್ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಸಹ ಕಾತುರರಾಗಿದ್ದಾರೆ. ಟಿಂಡರ್ನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಈ ಬಾರಿ ಯಾರಾದರೂ ಒಲಿಂಪಿಕ್ ಆಟಗಾರ್ತಿ ಜೊತೆ ಡೇಟ್ ಮಾಡಬೇಕೆಂದು ಆಸೆ ಹೊಂದಿದ್ದರಂತೆ. ಹೀಗಾಗಿ ಈ ವ್ಯಕ್ತಿ ಟಿಂಡರ್ ಆ್ಯಪ್ನಲ್ಲಿ ತಾವಿರುವ ಸ್ಥಳವನ್ನ ಒಲಿಂಪಿಕ್ ಕ್ರೀಡಾಗ್ರಾಮ ಎಂದು ತೋರಿಸಿದ್ದಾರೆ. ಟಿಂಡರ್ನಲ್ಲಿ ಆಟಗಾತಿಗಾಗಿ ತಾವು ಹುಡುಕಾಡಿದ್ದರ ಬಗ್ಗೆ ಸಂಪೂರ್ಣ ವಿವರಣೆಯನ್ನ ಅವರು ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ. ಕಳೆದ ರಾತ್ರಿ ನಾನು ಟಿಂಡರ್ನಲ್ಲಿ ನಾನಿರುವ ಸ್ಥಳವನ್ನ ಒಲಿಂಪಿಕ್ ಕ್ರೀಡಾಗ್ರಾಮವೆಂದು ತೋರಿಸಿದೆ. ಈ ರೀತಿ ಮಾಡಿದ್ರೆ ನನಗೆ ಯಾರಾದರೂ ಒಲಿಂಪಿಕ್ ಆಟಗಾರ್ತಿಯರು ಸಂಗಾತಿಯಾಗಿ ಸಿಗಬಹುದು ಎಂಬ ಅಭಿಲಾಷೆ ನನ್ನದಾಗಿತ್ತು ಎಂದು ರೀಡ್ ಕವ್ನರ್ ಹೇಳಿದ್ದಾರೆ. ಅಂದಹಾಗೆ ರೀಡ್ ಮಾಡಿದ ಈ ಪ್ಲಾನ್ ನಿಜಕ್ಕೂ ವರ್ಕ್ ಆಗಿದೆ. ಟಿಂಡರ್ನಲ್ಲಿ ರೀಡ್ಗೆ ಕೆನಡಾದ ಈಜುಪಟು ಕ್ಯಾಟರಿನ್ ಸಾವರ್ಡ್ ಸೇರಿದಂತೆ ಅನೇಕರು ಕಂಡಿದ್ದಾರೆ. ಟಿಕ್ಟಾಕ್ನಲ್ಲಿ ರೀಡ್ರ ಈ ವಿಡಿಯೋಗೆ ಸ್ವತಃ ಕ್ಯಾಟರಿನ್ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಟ್ವಿಟರ್ನಲ್ಲಿ 2ಮಿಲಿಯನ್ ಹಾಗೂ 4 ಮಿಲಿಯನ್ ವೀವ್ಸ್ ಸಂಪಾದಿಸಿದೆ Last night I made a TikTok about changing my Tinder location to put myself in the Olympic Village so that I can fall in love with an Olympian (medalists preferred). It got 2M views overnight, which is fun, but now Olympic Village Tinder is flooded with non-Olympians 😭 pic.twitter.com/71PXQGqUQV — Reed Kavner (@reedkavner) July 21, 2021