ಪಂಜಾಬ್: 175ನೇ ಸಿಖ್ ರೆಜಿಮೆಂಟ್ ಸಂಸ್ಥಾನ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸೈನಿಕರೊಂದಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
ಸೈನಿಕರೊಂದಿಗೆ ಪಂಜಾಬಿ ಹಾಡಿಗೆ ಮುಖ್ಯಮಂತ್ರಿಗಳು ಡ್ಯಾನ್ಸ್ ಮಾಡಿದ್ದಾರೆ. 2ನೇ ಬೆಟಾಲಿಯನ್ ನ ಸಿಖ್ ರೆಜಿಮೆಂಟ್ ನ ಜವಾನರೊಂದಿಗೆ ಮಾಡಿರುವ ನೃತ್ಯದ ವಿಡಿಯೋವನ್ನು ಸಿಎಂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೈನಿಕರೊಂದಿಗೆ ನೃತ್ಯ ಮಾಡಿದ ಬಳಿಕ ಎಲ್ಲರ ಬಳಿ ತೆರಳಿ ಕೈಕುಲುಕಿದ್ದಾರೆ. ‘’ನನ್ನ ನೆಚ್ಚಿನ ಸ್ಥಳವಾದ ಪಾಲ್ಟನ್ ನಲ್ಲಿ ಸಿಖ್ ಸೈನಿಕರೊಂದಿಗೆ 175ನೇ ಸಂಸ್ಥಾನ ದಿನದ ನೆನಪಿಗಾಗಿ. ಜೈ ಹಿಂದ್!’’ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಅಮರಿಂದರ್ ಸಿಂಗ್ ಅವರು 1963 ರಿಂದ 1969ರ ವರೆಗೆ ಸಿಖ್ ರೆಜಿಮೆಂಟ್ ನ 2ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, 99,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಸಿಎಂ ಕುಣಿತಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
https://twitter.com/capt_amarinder/status/1418227136683405322?ref_src=twsrc%5Etfw%7Ctwcamp%5Etweetembed%7Ctwterm%5E1418227136683405322%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fonce-a-fauji-always-a-fauji-punjab-cm-amarinder-singh-dances-with-jawans-of-his-paltan-watch%2F789045