ರಾಜ್ಯಕ್ಕೆ ಒಳ್ಳೆಯ ಸರ್ಕಾರ ನೀಡಲು ಆಗದವರು ಇದೀಗ ಮುಖ್ಯಮಂತ್ರಿ ಬದಲಾವಣೆ ಮಾಡುವ ಕಸರತ್ತು ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ರು.
ಬಿಜೆಪಿ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ಎಡವಿದೆ. ಡಬಲ್ ಎಂಜಿನ್ ಸರ್ಕಾರ ಇದ್ದರೂ ಸಹ ಇವರ ಕೈಲಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗಲಿಲ್ಲ. ಈ ಸರ್ಕಾರ ಗೌರವ ಎಲ್ಲಿ ಉಳಿಸಿಕೊಂಡಿದೆ..? ಯಾವ ಅಧಿಕಾರಿಗಳು ಅವರ ಮಾತು ಕೇಳ್ತಾರೆ..? ತರಾತುರಿಯಲ್ಲಿ ಎಲ್ಲಾ ಇಲಾಖೆಗಳ ಫೈಲ್ ಕ್ಲಿಯರ್ ಮಾಡ್ತಿದ್ದಾರೆ. ಸದನದಲ್ಲಿ ಎಲ್ಲಾ ದಾಖಲೆ ತೆಗೆದು ಮಾತಾನಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು ಅಂತಾ ಅನೇಕರು ಇಷ್ಟ ಪಡ್ತಿದ್ದಾರೆ. ಅವರ ಹೆಸರನ್ನು ನಾನು ಬಹಿರಂಗ ಮಾಡೋದಿಲ್ಲ. ಆದರೆ ಅಂತೋರೆಲ್ಲ ಮೊದಲು ಅರ್ಜಿ ಸಲ್ಲಿಸಲಿ, ಬಳಿಕ ನೋಡೋಣ ಎಂದು ಹೇಳಿದ್ರು.
ಸಿಎಂ ಸ್ಥಾನ ಬದಲಾವಣೆ ವಿಚಾರದಲ್ಲಿ ಮಠಾಧೀಶರ ಹಸ್ತಕ್ಷೇಪದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇವರು ಹೋಗಿ ಮಾತನಾಡಿಸಿದ್ದಕ್ಕೆ ಈಗ ಮಠಾಧೀಶರು ಬಂದಿದ್ದಾರೆ. ನೀವೇ ಮಠಕ್ಕೆ ಹೋಗಿಲ್ಲ ಅಂದರೆ ಅವರು ಈಗೇಕೆ ಬರ್ತಿದ್ರಿ..? ಇದರಲ್ಲಿ ಮಠಾಧೀಶರ ತಪ್ಪಿಲ್ಲ ಎಂದು ಹೇಳಿದ್ರು.