ಶುಕ್ರವಾರ ಅಂದ್ರೆ ಇಂದು ಡಿಜಿಟಲ್ ಆಹಾರ ವಿತರಣಾ ಕಂಪನಿ ಜೊಮಾಟೊ ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶ ಮಾಡಿದೆ. ಷೇರು ಮಾರುಕಟ್ಟೆ ಪ್ರವೇಶ ಮಾಡಿದ ಮೊದಲ ದಿನವೇ ಜೊಮಾಟೊ ಅಬ್ಬರಿಸಿದೆ.
ಕಂಪನಿ ಶೇಕಡಾ 51.32 ರಷ್ಟು ಪ್ರೀಮಿಯಂನೊಂದಿಗೆ ಷೇರುಗಳನ್ನು ಎನ್‌ಎಸ್‌ಇಯಲ್ಲಿ ಲೀಸ್ಟ್ ಮಾಡಲಾಗಿದೆ. ನಿರೀಕ್ಷೆಯಂತೆ, ಜೊಮಾಟೊ ಷೇರುಗಳು ಎನ್‌ಎಸ್‌ಇಯಲ್ಲಿ 116 ರೂಪಾಯಿ ಲೀಸ್ಟ್ ಆಗಿದೆ. ಬಿಎಸ್‌ಇನಲ್ಲಿ 115 ರೂಪಾಯಿಯಾಗಿದೆ.
ಜೊಮಾಟೊ ಷೇರುಗಳ ವೇಗ ಹೆಚ್ಚಾಗಿದೆ. ಇಲ್ಲಿಯವರೆಗೆ ಎನ್‌ಎಸ್‌ಇನಲ್ಲಿ ಜೊಮಾಟೊ ಷೇರುಗಳು ಇಂಟ್ರಾಡೇನಲ್ಲಿ 138.90 ರೂಪಾಯಿಗಳಿಗೆ ಏರಿದೆ. ಕಂಪನಿಯ ಷೇರುಗಳ ಮಾರುಕಟ್ಟೆ ಕ್ಯಾಪ್ 1 ಲಕ್ಷ ಕೋಟಿ ಮೀರಿದೆ. ಮಾರುಕಟ್ಟೆ ಕ್ಯಾಪ್ ಪಟ್ಟಿಯಲ್ಲಿ ಜೊಮಾಟೊ 45 ನೇ ಸ್ಥಾನ ಪಡೆದಿದೆ.
ಜೊಮಾಟೊ ಮಾರುಕಟ್ಟೆ ಕ್ಯಾಪ್, ಟಾಟಾ ಮೋಟಾರ್ಸ್, ಡಾಬರ್, ಗೋದ್ರೇಜ್ ಕನ್ಜ್ಯೂಮರ್, ಶ್ರೀ ಸಿಮೆಂಟ್, ಐಒಸಿ ಮತ್ತು ಬಿಪಿಸಿಎಲ್ ಯನ್ನು ಮೀರಿದೆ. ಕುತೂಹಲಕಾರಿ ಸಂಗತಿಯೆಂದರೆ, ಜೊಮಾಟೊ ಮಾರುಕಟ್ಟೆ ಕ್ಯಾಪ್ ಇನ್ಫೋ ಎಡ್ಜ್ ನ ಮಾರುಕಟ್ಟೆ ಕ್ಯಾಪ್ ಗಿಂತ ಹೆಚ್ಚಾಗಿದೆ.
ಜುಲೈ 27ರಂದು ಷೇರು ಮಾರುಕಟ್ಟೆ ಲೀಸ್ಟಿಂಗ್ ಸೇರಲು ಜೊಮಾಟೊ ನಿರ್ಧರಿಸಿತ್ತು. ಆದ್ರೆ ನಿಗದಿತ ದಿನಾಂಕಕ್ಕಿಂತ ಮೊದಲೇ ಮಾರುಕಟ್ಟೆ ಪ್ರವೇಶ ಮಾಡಿದೆ.