ಚಿಕ್ಕಬಳ್ಳಾಪುರ: ನಾವು ಪರೀಕ್ಷೆ ಪಾಸ್ ಆಗಿದ್ದೇವೆ. ರಿಸಲ್ಟ್ ಬಂದಾಯ್ತು ಅಲ್ವಾ? ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೀಶ್ವರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರದು ಸದಾ ದ್ವಂದ್ವ ನಿಲುವು ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರ ಹೋಗಿ ಕೆಲಸ ಮಾಡಿಸಿಕೊಳ್ಳುತ್ತಾರೆ. ನಂತರ ಯಡಿಯೂರಪ್ಪನವರನ್ನು ಕುಮಾರಸ್ವಾಮಿ ದೂಷಣೆ ಮಾಡುತ್ತಾರೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೂರ ಇಡಬೇಕು ಎಂದು ನಾನು ಹೇಳುತ್ತಿದ್ದೆ. ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು, ನಂಬಬಾರದು ಎಂದು ಹೇಳುತ್ತಿದ್ದೆ ಎಂದು ತಿಳಿಸಿದ್ದಾರೆ.
ಯಾರಿಗೂ ಯಾವುದು ಶಾಶ್ವತವಲ್ಲ, ನಾವೇನು ಶಾಶ್ವತವಾಗಿ ಮಂತ್ರಿಗಳಾಗಿ ಇರುವುದಿಲ್ಲ. ಈಗ ನಮ್ಮದು ಒಂದೇ ಪಕ್ಷದ ಸರ್ಕಾರವಾಗಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ.