alex Certify ಈ ಕಾರಣಕ್ಕೆ ತನ್ನ ಉತ್ಪನ್ನಗಳ ಹೆಸರನ್ನು ಬದಲಾಯಿಸಿದೆ ನೆಸ್ಲೆ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ತನ್ನ ಉತ್ಪನ್ನಗಳ ಹೆಸರನ್ನು ಬದಲಾಯಿಸಿದೆ ನೆಸ್ಲೆ ಕಂಪನಿ….!

ವೆನಿಲ್ಲಾ ಹಾಗೂ ಚಾಕಲೇಟ್​ನಿಂದ ಮಾಡಲ್ಪಟ್ಟ ಕುಕ್ಕಿ ಚಾಕಲೇಟ್​ಗಳು ಕಳೆದ 60 ವರ್ಷಗಳಿಂದ ಚಿಲಿ ದೇಶದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿತ್ತು. ಆದರೆ ನೆಗ್ರಿಟೋ ಎಂದರೆ ಚಿಕ್ಕ ಕಪ್ಪು ವ್ಯಕ್ತಿ ಎಂಬ ಅರ್ಥವನ್ನ ಹೊಂದಿದೆ ಎಂಬ ಕಾರಣಕ್ಕೆ ಇದೀಗ 60 ವರ್ಷಗಳ ಹಿಂದಿನ ತನ್ನ ಹೆಸರನ್ನ ಬದಲಾಯಿಸಿಕೊಂಡಿದೆ.

ನೆಗ್ರಿಟೋ ಅಥವಾ ನೆಗ್ರಿಟಾ ಸ್ತ್ರೀ ಆವೃತ್ತಿಗಳಾ ಗೋರ್ಡೊ ಅಥವಾ ಗೋರ್ಡಾ ಇವೆಲ್ಲ ಶಬ್ದಗಳನ್ನ ಲ್ಯಾಟಿನ್ ಅಮೆರಿಕದಂತಹ ದೇಶಗಳಲ್ಲಿ ಕಪ್ಪು ಬಣ್ಣದ ಸಣ್ಣ ವ್ಯಕ್ತಿ ಎಂಬ ಅರ್ಥವನ್ನ ಹೊಂದಿದೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ನೆಸ್ಲೆ ಕಂಪನಿ, ಈ ರೀತಿಯ ಹೆಸರು ತಾರತಮ್ಯಕ್ಕೆ ಕಾರಣವಾಗುತ್ತಿದೆ ಎಂಬುದು ಗಮನಕ್ಕೆ ಬಂದ ಬಳಿಕ 60 ವರ್ಷಗಳಿಂದ ನೆಗ್ರಿಟಾ ಎಂಬ ಹೆಸರನ್ನ ಹೊಂದಿದ್ದ ಈ ಕುಕ್ಕೀಸ್​ಗಳು ಇನ್ಮುಂದೆ ಚೋಕಿಟಾ ಎಂಬ ಹೆಸರಿನ ಮೂಲಕ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...