
ಐದು ವರ್ಷಗಳ ಹಿಂದೆ, ರಿಯೊ ಒಲಿಂಪಿಕ್ಸ್ ನಲ್ಲಿ 36 ಒಡಹುಟ್ಟಿದವರು ಪಾಲ್ಗೊಂಡಿದ್ದರು. ಈ ಬಾರಿ ಟೋಕಿಯೊದ 25 ಒಡಹುಟ್ಟಿದವರು ಸ್ಪರ್ಧೆಗಿಳಿಯಲಿದ್ದಾರೆ. ರಷ್ಯಾದ ಅವಳಿ ಸಹೋದರಿಯರಾದ ಅರೀನಾ ಮತ್ತು 22 ವರ್ಷದ ದಿನಾ ಜಿಮ್ನಾಸ್ಟಿಕ್ಸ್ ನಲ್ಲಿ ಪದಕಕ್ಕಾಗಿ ಹೋರಾಡಲಿದ್ದಾರೆ. ಅವೆರಿನಾ ಸಹೋದರಿಯರು ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ತಿದ್ದಾರೆ.
ಅವಳಿ ಸಹೋದರರಾದ ಬ್ರಿಟನ್ನ ಲ್ಯೂಕ್ ಮತ್ತು ಪ್ಯಾಟ್ ಬಾಕ್ಸಿಂಗ್ ರಿಂಗ್ನಲ್ಲಿ ಪಂಚ್ ಮಾಡಲಿದ್ದಾರೆ. ಇದು ಪ್ಯಾಟ್ನ ಎರಡನೆ ಒಲಂಪಿಕ್ಸ್ ಮತ್ತು ಲ್ಯೂಕ್ನ ಮೊದಲ ಒಲಿಂಪಿಕ್ಸ್. ಬ್ರಿಟನ್ನ 28 ವರ್ಷದ ಆಡಮ್ ಮತ್ತು ಸೈಮನ್ ಯೇಟ್ಸ್ ಸೈಕ್ಲಿಂಗ್ ಸ್ಪರ್ಧೆ ನಡೆಸಲಿದ್ದು, 16 ವರ್ಷದ ಅವಳಿ ಸಹೋದರಿಯರಾದ ಜೆನ್ನಿಫರ್ ಮತ್ತು ಜೆಸ್ಸಿಕಾ ಜಿಮ್ನಾಸ್ಟಿಕ್ ಪ್ರದರ್ಶನ ನೀಡಲಿದ್ದಾರೆ. ಫ್ರಾನ್ಸ್ ನ ಅವಳಿ ಈಜುಗಾರರಾದ ಟ್ರೆಂಬಲ್ ಸಹೋದರಿಯರಾದ ಲಾರಾ ಮತ್ತು ಷಾರ್ಲೆಟ್ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಹ್ಯಾರಿ ಮತ್ತು ಹನ್ನಾ ಮಾರ್ಟಿನ್ ಸಹೋದರ-ಸಹೋದರಿ ಜೋಡಿ ಯುಕೆ ಹಾಕಿ ತಂಡಗಳಲ್ಲಿ ಆಡಲಿದೆ. ಇದು ಹ್ಯಾರಿಯ ಮೂರನೇ ಒಲಿಂಪಿಕ್ಸ್ ಆಗಿದ್ದರೆ, ಹನ್ನಾ ಮೊದಲ ಬಾರಿಗೆ ಸವಾಲು ಹಾಕಲಿದ್ದಾರೆ. ನೆದರ್ಲೆಂಡ್ಸ್ ನ ಅವಳಿ ವೀವರ್ ಸಹೋದರಿಯರಾದ ಸಾನೆ ಮತ್ತು ಲೈಕ್ ಸತತ ಎರಡನೇ ಬಾರಿಗೆ ಜಿಮ್ನಾಸ್ಟಿಕ್ ಪ್ರದರ್ಶನ ನೀಡಲಿದ್ದಾರೆ.