ಟೋಕಿಯೊ ಒಲಿಂಪಿಕ್ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದ ನಿರ್ದೇಶಕ ಕೆಂಟಾರೊ ಕೋಬಯಾಶಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ದಶಕಗಳಷ್ಟು ಹಳೆಯ ಹತ್ಯಾಕಾಂಡದ ಉಲ್ಲೇಖವನ್ನು ತೆಗೆದುಕೊಂಡು ಹಾಸ್ಯದ ಸ್ಕಿಟ್ ಬಳಸಿದ್ದಕ್ಕಾಗಿ ಉದ್ಘಾಟನ ಸಮಾರಂಭದ ನಿರ್ದೇಶಕ ಕೋಬಯಾಶಿ ಸಂಘಟಕರ ಕೋಪಕ್ಕೆ ತುತ್ತಾಗಿದ್ದಾರೆ.
ಸ್ಕಿಟ್‌ನಲ್ಲಿ ಕೊಬಯಾಶಿ ಮತ್ತು ಟಿವಿ ನಿರೂಪಕ ಜೋಡಿಯಾಗಿ ನಟಿಸುವವರಿದ್ದರು. ಪೇಪರ್ ಕಟೌಟ್, ಗೊಂಬೆಗಳನ್ನು ಬಳಸಿ ಹತ್ಯಾಕಾಂಡ ಮಾಡೋಣ ಎಂದವರು ಉಲ್ಲೇಖಿಸುತ್ತಾರೆ.
ಹತ್ಯಾಕಾಂಡದ ಚಟುವಟಿಕೆಯ ಸಲಹೆಯಿಂದ ಟೆಲಿವಿಷನ್ ನಿರ್ಮಾಪಕರು ಹೇಗೆ ಕೋಪಗೊಂಡರು ಎಂಬುದರ ಬಗ್ಗೆ ಈ ಜೋಡಿ ತಮಾಷೆ ಮಾಡುತ್ತದೆ.