ಭಾರತೀಯ ಆಟಗಾರರು ಟೋಕಿಯೊ ಒಲಿಂಪಿಕ್ಸ್ ಗ್ರಾಮ ತಲುಪಿದ್ದಾರೆ. ಬುಧವಾರ ಭಾರತೀಯ ದಳದಲ್ಲಿ ಗೊಂದಲ ಮನೆ ಮಾಡಿತ್ತು. ತಂಡದಲ್ಲಿದ್ದ ಮೂವರು ಸದಸ್ಯರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎಂಬ ಗೊಂದಲ ಮನೆ ಮಾಡಿತ್ತು. ತಂಡದ ಡೆಪ್ಯೂಟಿ ಚೆಫ್ ಡಿ ಮಿಷನ್ ಪ್ರೇಮ್ ವರ್ಮಾ, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಆಟಗಾರರು ಅಥವಾ ತಂಡದ ಸದಸ್ಯರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಒಲಿಂಪಿಕ್ಸ್ ಆರೋಗ್ಯ ಅಪ್ಲಿಕೇಶನ್‌ನಲ್ಲಿ ತಪ್ಪಾದ ಮಾಹಿತಿಯನ್ನು ಭರ್ತಿ ಮಾಡಿದ್ದರಿಂದ ಹೀಗಾಗಿದೆ ಎಂದವರು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಭಾರತದಿಂದ ಬಹುತೇಕ ಎಲ್ಲ ಆಟಗಾರರು ಆಗಮಿಸಿದ್ದಾರೆ. ಮೊದಲ ಬ್ಯಾಚ್ ಆಟಗಾರರು ಜುಲೈ 18 ರಂದು ಪ್ರಯಾಣ ಬೆಳೆಸಿದ್ದರು. ಒಟ್ಟು 90 ಆಟಗಾರರು ಮತ್ತು ಅಧಿಕಾರಿಗಳು ಒಲಂಪಿಕ್ಸ್ ನಲ್ಲಿ ಭಾಗಿಯಾಗಲಿದ್ದಾರೆ.
ಕೆಲ ಕ್ರೀಡಾಪಟುಗಳು ಮಾತ್ರ ಇನ್ನೂ ಭಾರತದಲ್ಲಿದ್ದು, ಅವರು ಶೀಘ್ರದಲ್ಲೇ ಹೊರಡಲಿದ್ದಾರೆ. ಕ್ರೀಡಾಕೂಟದ ಈ ಭವ್ಯ ಪಂದ್ಯಾವಳಿ ಜುಲೈ 23 ರಿಂದ ಜಪಾನ್‌ನ ಟೋಕಿಯೊದಲ್ಲಿ ಪ್ರಾರಂಭವಾಗಲಿದೆ. ಕೊರೊನಾ ಕಾರಣದಿಂದಾಗಿ ಒಲಿಂಪಿಕ್ಸ್ ಸಂಘಟಕರು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದಾರೆ.