alex Certify ಸೋಂಕು ತಗಲುವ ಭಯಕ್ಕೆ 1ವರ್ಷಕ್ಕೂ ಹೆಚ್ಚು ಕಾಲ ಮನೆಯೊಳಗೆ ಲಾಕ್​ ಆದ ಕುಟುಂಬ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕು ತಗಲುವ ಭಯಕ್ಕೆ 1ವರ್ಷಕ್ಕೂ ಹೆಚ್ಚು ಕಾಲ ಮನೆಯೊಳಗೆ ಲಾಕ್​ ಆದ ಕುಟುಂಬ..!

ಕೊರೊನಾ ವೈರಸ್​ ತಗಲುತ್ತೆ ಎಂಬ ಭಯದಲ್ಲಿ ಕುಟುಂಬವೊಂದು ಬರೋಬ್ಬರಿ 15 ತಿಂಗಳುಗಳ ಕಾಲ ಪ್ರತ್ಯೇಕ ಟೆಂಟ್​ನಲ್ಲೇ ವಾಸವಾಗಿದ್ದು, ಈ ಕುಟುಂಬವನ್ನ ಬುಧವಾರ ಪೊಲೀಸರು ರಕ್ಷಿಸಿದ್ದಾರೆ.

ಆಂದ್ರ ಪ್ರದೇಶದ ಕಡಾಲಿ ಎಂಬ ಗ್ರಾಮದಲ್ಲಿ ಈ ವಿಚಿತ್ರ ಘಟನೆ ಸಂಭವಿಸಿದೆ. ಪೊಲೀಸರು ವಿಚಾರಿಸಿದ ವೇಳೆ ಈ ಕುಟುಂಬ ಕೊರೊನಾ ವೈರಸ್​ ತಗಲುತ್ತೆ ಎಂಬ ಭಯದ ಹಿನ್ನೆಲೆಯಲ್ಲಿ ತಾವು ಈ ರೀತಿ ವಾಸವಿದ್ದಿದ್ದಾಗಿ ಹೇಳಿಕೊಂಡಿದೆ.

ಕಡಲಿ ಗ್ರಾಮದ ಸರಪಂಚ್​ ಚೊಪ್ಪಲ ಗುರುನಾಥ್​ ನೀಡಿರುವ ಮಾಹಿತಿಯ ಪ್ರಕಾರ 50 ವರ್ಷದ ರತ್ನಮಾಲಾ, 32 ವರ್ಷದ ಕಾಂತಾಮಣಿ ಹಾಗೂ 30 ವರ್ಷದ ರಾಣಿ ಎಂಬವರು 15 ತಿಂಗಳ ಹಿಂದೆ ಟೆಂಟ್​ ಒಂದರಲ್ಲಿ ತಮ್ಮನ್ನ ತಾವು ಲಾಕ್​ ಮಾಡಿಕೊಂಡಿದ್ದರು. 15 ತಿಂಗಳ ಹಿಂದೆ ಇವರ ನೆರೆಮನೆಯವರು ಕೋವಿಡ್​ 19ನಿಂದ ಮೃತರಾದ ಹಿನ್ನೆಲೆ ಈ ಕುಟುಂಬ ಕಠಿಣ ನಿರ್ಧಾರ ಕೈಗೊಂಡಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಸರಪಂಚ್​ ಗುರುನಾಥ್​, ಚುಟ್ಟುಗಲ್ಲಾ ಬೆನ್ನಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಿದ್ದಾರೆ. ಕೊರೊನಾದಿಂದ ಹೆದರಿಕೊಂಡು ಕಳೆದ 15 ತಿಂಗಳಿನಿಂದ ಇವರು ಮನೆಬಿಟ್ಟು ಆಚೆಯೇ ಬಂದಿಲ್ಲ. ಆಶಾ ಕಾರ್ಯಕರ್ತೆಯೊಬ್ಬರು ಇವರ ಮನೆಗೆ ಭೇಟಿ ನೀಡಿದ್ದ ವೇಳೆ ಯಾರೂ ಪ್ರತಿಕ್ರಿಯೆ ನೀಡದ್ದನ್ನ ಗಮನಿಸಿ ನಮಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಅವರ ಸಂಬಂಧಿಗಳು ಈ ಮನೆಯಲ್ಲಿ ಮೂವರು ತಮ್ಮನ್ನ ತಾವು ಲಾಕ್​ ಮಾಡಿಕೊಂಡಿದ್ದು ಮೂವರ ಆರೋಗ್ಯ ಸ್ಥಿತಿಯು ಹದಗೆಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ರು.

ಈ ಎಲ್ಲಾ ವಿಚಾರಗಳು ನಮಗೆ ತಿಳಿಯುತ್ತಿದ್ದಂತೆ ನಾವು ಆ ಸ್ಥಳಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದೆವು. ಪೊಲೀಸರು ಮನೆಯ ಸದಸ್ಯರನ್ನ ಹೊರಗೆ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಎಷ್ಟೋ ದಿನಗಳಿಂದ ಸ್ನಾನವನ್ನೇ ಮಾಡಿರಲಿಲ್ಲ. ಅಲ್ಲದೇ ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಮೂವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು ಎಂದು ಗುರುನಾಥ್​ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...