ತೆರಿಗೆದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ತೆರಿಗೆ ಪಾವತಿಯ ಕೊನೆ ದಿನಾಂಕದ ಬಗ್ಗೆ ಚಿಂತಿತರಾಗಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೇಂದ್ರ ನೇರ ತೆರಿಗೆ ಮಂಡಳಿ, ಫಾರ್ಮ್ 15 ಸಿಎ/15 ಸಿಬಿ ಭರ್ತಿ ಮಾಡುವ ಗಡುವನ್ನು ವಿಸ್ತರಿಸಿದೆ. ಆಗಸ್ಟ್ 15, 2021 ರವರೆಗೆ ಫಾರ್ಮ್ ಭರ್ತಿ ಮಾಡಬಹುದು. ಈ ಮೊದಲು ಜುಲೈ 15 ಕೊನೆ ದಿನಾಂಕವಾಗಿತ್ತು.
ಆದಾಯ ತೆರಿಗೆ ಇಲಾಖೆ ಪ್ರಾರಂಭಿಸಿದ ಪೋರ್ಟಲ್ನಲ್ಲಿನ ಸಮಸ್ಯೆಯಿಂದಾಗಿ ಅದರ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಜೂನ್ 7ರಂದು ಹೊಸ ಪೋರ್ಟಲ್ ಪ್ರಾರಂಭಿಸಿದೆ. ಇದ್ರಿಂದಾಗಿ ತೆರಿಗೆದಾರರಿಗೆ ನಿರಂತರ ಸಮಸ್ಯೆಯಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ತೆರಿಗೆ ಇಲಾಖೆ, ಗಡುವು ವಿಸ್ತರಿಸಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ, ಫಾರ್ಮ್ 15 ಸಿಎ/15 ಸಿಬಿಯನ್ನು ಆದಾಯ ತೆರಿಗೆ ಪೋರ್ಟಲ್ನಲ್ಲಿ ಎಲೆಕ್ಟ್ರಾನಿಕ್ ವಿಧಾನದಲ್ಲಿ ಸಲ್ಲಿಸಬೇಕಾಗುತ್ತದೆ. ಈ ಫಾರ್ಮ್ಗಳನ್ನು ಸಲ್ಲಿಸಿದ ನಂತರವೇ ಅಧಿಕೃತ ವಿತರಕರು ವಿದೇಶಕ್ಕೆ ಹಣವನ್ನು ಕಳುಹಿಸಬಹುದು.ಇದಕ್ಕೂ ಮೊದಲು ಹಣವನ್ನು ವಿದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ.