alex Certify ಅಸ್ಥಿಪಂಜರದ ನಡುವೆ ಇತ್ತು ದ್ರವ ತುಂಬಿದ ಬಾಟಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಥಿಪಂಜರದ ನಡುವೆ ಇತ್ತು ದ್ರವ ತುಂಬಿದ ಬಾಟಲ್..!

ಲಂಡನ್: ಅಸ್ಥಿಪಂಜರವೊಂದರ ಕಾಲುಗಳ ಮಧ್ಯೆ ಇದ್ದ ದ್ರವ ತುಂಬಿದ ಬಾಟಲಿಯನ್ನು ಯುಕೆ ಪುರಾತತ್ತ್ವಜ್ಞರು ಪತ್ತೆಹಚ್ಚಿದ್ದಾರೆ. ಇದು 19ನೇ ಶತಮಾನದ ಪಾನೀಯವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹೌದು, ಇಂಗ್ಲೆಂಡ್ ನಲ್ಲಿ ಈ ಘಟನೆ ನಡೆದಿದ್ದು, 70 ಮಂದಿ ತಜ್ಞರ ತಂಡವು ಹಲ್ ನ ಟ್ರಿನಿಟಿ ಸ್ಮಶಾನದಲ್ಲಿ ಅಸ್ಥಿಪಂಜರದ ಜತೆ ಬಾಟಲಿಯಿರುವುದನ್ನು ಪತ್ತೆಹಚ್ಚಿದ್ದಾರೆ.

ಇದೊಂದು ಮಹಿಳೆಯ ಅಸ್ಥಿಪಂಜರವಾಗಿದ್ದು, ನೀಲಿ ಬಣ್ಣದ ಗಾಜಿನ ಬಾಟಲಿಯಲ್ಲಿ ಕಂದುಬಣ್ಣದ ದ್ರವವಿದೆ. 60ರ ದಶಕದಲ್ಲಿ ಮರಣಹೊಂದಿದ ಮಹಿಳೆಯ ಕಾಲಿನ ಮೂಳೆಗಳ ನಡುವೆ ಇದನ್ನು ಇರಿಸಲಾಗಿತ್ತು. ಹೆಚ್ಚಿನ ವಿಶ್ಲೇಷಣೆಗಾಗಿ ಸಿಕ್ಕಂತಹ ದ್ರವ ಹೊಂದಿದ ಬಾಟಲಿಯ ಮಾದರಿಯನ್ನು ನಾಟಿಂಗ್ಹ್ಯಾಮ್ ಟ್ರೆಂಡ್ ವಿಶ್ವವಿದ್ಯಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

BIG NEWS: ಸಂದಿಗ್ಧ ಕಾಲದಲ್ಲಿ ಸಮರ್ಥ ಸಿಎಂ ಬದಲಾವಣೆ ಬೇಡ; ಯಡಿಯೂರಪ್ಪ ಪೂರ್ಣಾವಧಿ ಪೂರೈಸಲಿ; ಸಿದ್ಧಗಂಗಾ ಶ್ರೀ ಆಗ್ರಹ

ಅಸ್ಥಿಪಂಜರದಲ್ಲಿ ಸಿಕ್ಕಂತಹ ದ್ರವದಲ್ಲಿ ಸೋಡಿಯಂ, ಪೊಟ್ಯಾಸಿಯಂ ಹಾಗೂ ರಂಜಕ ಇರುವುದು ಧೃಡಪಟ್ಟಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗಿದೆ. ಇನ್ನು ಈ ದ್ರವವು ಫಾಸ್ಫೇಟ್ ಆಧಾರಿತ ಟಾನಿಕ್ ಪಾನೀಯವೂ ಆಗಿರಬಹುದು ಎಂದು ಆಸ್ಟಿಯಾಲಜಿ ಮೇಲ್ವಿಚಾರಕ ಡಾಲ್ಮನ್ ಹೇಳಿದ್ದಾರೆ.

19ನೇ ಶತಮಾನದಲ್ಲಿ ಈ ಪಾನೀಯ ಬಹಳ ಜನಪ್ರಿಯತೆ ಪಡೆದಿತ್ತು. ಅಲ್ಲದೆ ವಿವಿಧ ಕಾಯಿಲೆಗಳು ಇದರಿಂದ ಗುಣಮುಖವಾಗುತ್ತದೆ ಅನ್ನೋ ಜಾಹಿರಾತುಗಳು ಆ ಸಮಯದಲ್ಲಿ ಹರಿದಾಡುತ್ತಿತ್ತು ಎನ್ನಲಾಗಿದೆ.

1783 ಹಾಗೂ 1861ರ ನಡುವೆ ಈ ಸ್ಮಶಾನದಲ್ಲಿ ಹೆಣಗಳ ಸಮಾಧಿ ಮಾಡಲಾಗಿದೆ ಎಂದು ನಂಬಲಾಗಿದೆ. ತಜ್ಞರ ತಂಡವು ಸುಮಾರು 1,500 ಅಸ್ಥಿಪಂಜರಗಳನ್ನು ಹೊರತೆಗೆದು ಪರೀಕ್ಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...