alex Certify BIG NEWS: ಸಂದಿಗ್ಧ ಕಾಲದಲ್ಲಿ ಸಮರ್ಥ ಸಿಎಂ ಬದಲಾವಣೆ ಬೇಡ; ಯಡಿಯೂರಪ್ಪ ಪೂರ್ಣಾವಧಿ ಪೂರೈಸಲಿ; ಸಿದ್ಧಗಂಗಾ ಶ್ರೀ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಂದಿಗ್ಧ ಕಾಲದಲ್ಲಿ ಸಮರ್ಥ ಸಿಎಂ ಬದಲಾವಣೆ ಬೇಡ; ಯಡಿಯೂರಪ್ಪ ಪೂರ್ಣಾವಧಿ ಪೂರೈಸಲಿ; ಸಿದ್ಧಗಂಗಾ ಶ್ರೀ ಆಗ್ರಹ

ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೆ ಇಂದು ಕೂಡ ಮಠಾಧೀಶರು ಸಿಎಂ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಲು ಅವಕಾಶ ನೀಡಬೇಕು ಎಂಬ ಸ್ಪಷ್ಟ ಸಂದೇಶವನ್ನು ಸ್ವಾಮೀಜಿಗಳು ಹೈಕಮಾಂಡ್ ಗೆ ರವಾನಿಸಿದ್ದಾರೆ.

ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ ನೇತೃತ್ವದಲ್ಲಿ ಮಠಾಧೀಶರ ನಿಯೋಗ ಸಿಎಂ ಯಡಿಯೂರಪ್ಪ ಭೇಟಿಯಾಗಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಗಂಗಾ ಶ್ರೀ,
ಕಳೆದ ಒಂದು ವಾರದಿಂದ ಸಿಎಂ ಬದಲಾವಣೆ ವಿಚಾರವಾಗಿ ಕೆಲ ಸುದ್ದಿಗಳು ಹರಡುತ್ತಿವೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ನಡೆಸಿದ್ದು, ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸುವ ಯತ್ನ ಮಾಡಿದ್ದೇವೆ ಎಂದರು.

ಮಳೆಗಾಲ ಆರಂಭವಾಗಿದೆ, ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಎದುರಾಗಿದೆ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಇಂತಹ ಸಂದಿಗ್ಧ ಕಾಲದಲ್ಲಿ ಸಮರ್ಥ ನಾಯಕನ ಬದಲಾವಣೆ ಮಾಡುವುದು ಸರಿಯಲ್ಲ. ಬದಲಾವಣೆ ಮಾಡುವುದರಿಂದ ಸರ್ಕಾರ ಸುಭದ್ರವಾಗಿಯೂ ಇರಲಾರದು, ಜನರಿಗೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗಲ್ಲ. ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ.

ಭಾರತದ ನಾಗರಿಕರಾಗಿದ್ದರೆ ಸುಲಭವಾಗಿ ಪಡೆಯಿರಿ ‘ಪಡಿತರ ಚೀಟಿ’

ಓರ್ವ ಪಕ್ಷಾತೀತ ನಾಯಕನಾಗಿದ್ದಾರೆ ಹೀಗಾಗಿ ಯಡಿಯೂರಪ್ಪನವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಮುಂದೆ ಚುನಾವಣೆ ಬಂದಾಗ ಬೇರೆಯವರು ಸಿಎಂ ಆದರೆ ಅದಕ್ಕೆ ನಮ್ಮ ಆಕ್ಷೇಪಣೆಗಳಿಲ್ಲ. ನಾವು ರಾಜಕಾರಣಿಗಳ ಪರವಾಗಿಯಾಗಲಿ ಅಥವಾ ಯಾವುದೇ ಸಮುದಾಯದ ಪರವಾಗಿಯಾಗಲಿ ಮಾತನಾಡುತ್ತಿಲ್ಲ. ಯಾರೇ ಮುಖ್ಯಮಂತ್ರಿಯಾದರೂ ನಮ್ಮ ಮುಖ್ಯಮಂತ್ರಿಗಳೇ ಆಗಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜಾತಿಬೇಧವಿಲ್ಲ ಎಲ್ಲರಿಗೂ ಅವಕಾಶವಿದೆ ಆದರೆ ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿ ಎಂಬುದು ಮಾತ್ರ ನಮ್ಮೆಲ್ಲರ ಉದ್ದೇಶ ಎಂದು ಹೆಳಿದರು.

ಇನ್ನು ರಾಜೀನಾಮೆ ಬಗ್ಗೆ ಸಿಎಂ ಯಡಿಯೂರಪ್ಪ ಏನನ್ನೂ ಹೇಳಿಲ್ಲ, 75 ವರ್ಷ ದಾಟಿದ ಯಾರಿಗೂ ಆಡಳಿತಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಪ್ರಧಾನಿ ಮೋದಿ ಹಾಗೂ ಹೈಕಮಾಂಡ್ ನಮ್ಮ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದೆ ಎಂದಷ್ಟೇ ಹೇಳಿದ್ದಾರೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...