ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ನವೀಕರಿಸಲು ಬಯಸಿದ್ರೆ ಎಲ್ಲಿಗೂ ಹೋಗ್ಬೇಕಾಗಿಲ್ಲ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇನ್ಮುಂದೆ ಪೋಸ್ಟ್ ಮೆನ್ ನಿಮ್ಮ ಮನೆಗೆ ಬಂದು ಮೊಬೈಲ್ ಸಂಖ್ಯೆಯನ್ನು ನವೀಕರಿಸುತ್ತಾರೆ.
ಈ ಸೌಲಭ್ಯಕ್ಕಾಗಿ ಯುಐಡಿಎಐ,ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆಧಾರ್ ಕಾರ್ಡ್ ಹೊಂದಿರುವವರು ಮನೆಯಲ್ಲಿಯೇ ಮೊಬೈಲ್ ನಂಬರ್ ನವೀಕರಿಸಲು ಅವಕಾಶ ನೀಡ್ತಿದೆ. 650 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು 1.46 ಲಕ್ಷ ಪೋಸ್ಟ್ ಮೆನ್ ಮತ್ತು ಗ್ರಾಮೀಣ ಡಾಕ್ ಸೇವಕ್ ಮೂಲಕ ಈ ಸೌಲಭ್ಯ ನೀಡಲಾಗುವುದು.
ಆರಂಭದಲ್ಲಿ ಐಪಿಪಿಬಿ, ಮೊಬೈಲ್ ಸಂಖ್ಯೆಯನ್ನು ಮಾತ್ರ ನವೀಕರಿಸುವ ಸೌಲಭ್ಯವನ್ನು ನೀಡ್ತಿದೆ. ಶೀಘ್ರದಲ್ಲೇ ಈ ಸೌಲಭ್ಯಗಳನ್ನು ವಿಸ್ತರಿಸುವ ಸಾಧ್ಯತೆಯಿದೆ. ಮಾರ್ಚ್ 31, 2021 ರ ವೇಳೆಗೆ, ಯುಐಡಿಎಐ 128.99 ಕೋಟಿ ಆಧಾರ್ ಸಂಖ್ಯೆಯನ್ನು ಭಾರತದ ನಿವಾಸಿಗಳಿಗೆ ನೀಡಿದೆ.
ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಬಯಸಿದ್ದರೆ, ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಸಾಧ್ಯವಿಲ್ಲ. ಲಿಂಕ್ ಮಾಡಲು ಯಾವುದೇ ರೀತಿಯ ದಾಖಲೆಗಳ ಅಗತ್ಯವಿಲ್ಲ. ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ.