ಕೆಲವರು ಭೂತವನ್ನು ನಂಬುತ್ತಾರೆ. ಮತ್ತೆ ಕೆಲವರು ಭೂತ, ಪಿಶಾಚಿಯನ್ನು ನಂಬುವುದಿಲ್ಲ. ಭೂತದ ಬಗ್ಗೆ ಅನೇಕ ಕಥೆಗಳನ್ನು ಆಗಾಗ ಕೇಳ್ತಿರುತ್ತೇವೆ. ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳು ತನಗಾದ ಭೂತದ ಅನುಭವನ್ನು ಹಂಚಿಕೊಂಡಿದ್ದಾಳೆ.
ಇಂಗ್ಲೆಂಡ್ ನಲ್ಲಿ ವಾಸವಾಗಿರುವ ಮಹಿಳೆ ಹಾಗೂ ಆಕೆ ತಂದೆಗೆ ಭೂತವೊಂದು ಸಾಕಷ್ಟು ಕಾಟ ಕೊಟ್ಟಿದೆ. ಆರಂಭದಲ್ಲಿ ಭೂತ ಚೇಷ್ಠೆಯನ್ನು ನಿರ್ಲಕ್ಷ್ಯಿಸಿದ್ದರಂತೆ. ಆದ್ರೆ ಭೂತದ ಕಾಟ ಹೆಚ್ಚಾಗ್ತಿದ್ದಂತೆ ಅದನ್ನು ಗಂಭೀರವಾಗಿ ಪರಿಗಣಿಸಿದ್ದರಂತೆ. ಕೋಲೆಟ್ ನ ಮನೆಯ ಕಪಾಟಿನ ಬಳಿ ವಿಚಿತ್ರ ಶಬ್ಧ ಬರ್ತಿದ್ದಂತೆ. ಕೋಲೆಟ್ ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಒಂದು ವರ್ಷದ ಹಿಂದೆ ಕೊಲೆಯೊಂದು ನಡೆದಿತ್ತಂತೆ. ಆತ ಭೂತವಾಗಿ ಬಂದು ಕಾಡ್ತಿದ್ದಾನೆಂದು ಕೋಲೆಟ್ ಅಂದಾಜಿಸಿದ್ದಳಂತೆ.
ಕೋಲೆಟ್ ಬಾತ್ ರೂಮಿಗೆ ನುಗ್ಗಿದ ಭೂತ ಆಕೆಗೆ ತೊಂದರೆ ಕೊಟ್ಟಿತ್ತಂತೆ. ಇದ್ದಕ್ಕಿದ್ದಂತ ಮೈಮೇಲಾದ ಗಾಯಗಳನ್ನು ನೋಡಿ ದಂಗಾದ ಕೋಲೆಟ್ ತಾಯಿ, ಇದನ್ನೆಲ್ಲ ನಿಯಂತ್ರಿಸಬಲ್ಲ ಇಯಾನ್ ಸಂಪರ್ಕಿಸಿದ್ದರಂತೆ. ಇಯಾನ್ ಮನೆಯಲ್ಲಿದ್ದ ಭೂತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರಂತೆ. ಈಗ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾಳೆ ಕೋಲೆಟ್.