ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1464 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 29 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
2706 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 26,256 ಸಕ್ರಿಯ ಪ್ರಕರಣಗಳು ಇವೆ. ಇಂದು 1,13,456 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 1.29 ರಷ್ಟು ಇದೆ.
ಬೆಂಗಳೂರಿನಲ್ಲಿ ಇಂದು 1110 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಹೊಸದಾಗಿ 352 ಜನರಿಗೆ ಪಾಸಿಟಿವ್ ವರದಿ ಬಂದಿದೆ.
ರಾಜ್ಯದಲ್ಲಿ ಇದುವರೆಗೆ 28,24,197 ಜನ ಗುಣಮುಖರಾಗಿದ್ದಾರೆ. 36,226 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 28,86,702 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10,046 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೆ 15,807 ಸೋಂಕಿತರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 200 ಮಂದಿಗೆ ಸೋಂಕು ತಗುಲಿದೆ. ಹಾಸನ ಜಿಲ್ಲೆಯಲ್ಲಿ 108, ಮೈಸೂರು 117, ತುಮಕೂರು 86, ಚಿಕ್ಕಮಗಳೂರು 81, ಬೆಳಗಾವಿ 75 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಾಗಲಕೋಟೆ 1, ಬಳ್ಳಾರಿ 8, ಬೀದರ್ 2, ಚಿಕ್ಕಬಳ್ಳಾಪುರ 8, ಗದಗ 1, ಹಾವೇರಿ 3, ಕಲಬುರ್ಗಿ 8, ಕೊಪ್ಪಳ 0, ರಾಯಚೂರು 3, ರಾಮನಗರ 4, ವಿಜಯಪುರ 4 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಇಂದು ಬೆಳಗಾವಿಯಲ್ಲಿ 1, ಬೆಂಗಳೂರು ನಗರ 5, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 3, ಧಾರವಾಡ 1, ಹಾಸನ 3, ಹಾವೇರಿ 2, ಕಲಬುರ್ಗಿ 1, ಕೊಡಗು 1, ಕೋಲಾರ 2, ಮಂಡ್ಯ 2, ಮೈಸೂರು 3, ಶಿವಮೊಗ್ಗ 1, ತುಮಕೂರು 2, ಉಡುಪಿ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಸೋಂಕಿತರು ಮೃತಪಟ್ಟಿಲ್ಲ.