ಧಾರವಾಡ: ಮದ್ಯ ಸೇವನೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹಾರೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡ ತೆಲುಗರ ಓಣಿಯಲ್ಲಿ ನಡೆದಿದೆ.
36 ವರ್ಷದ ಬಸವರಾಜ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಆತನ ತಂದೆ ಪಕೀರಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿದಿನ ಕುಡಿಯಲು ಹಣ ಕೊಡುವಂತೆ ಬಸವರಾಜ ಪೀಡಿಸುತ್ತಿದ್ದ ಹಣ ಕೊಡದಿದ್ದರೆ ಮನೆಯ ಆಸ್ತಿ ದಾಖಲೆಗಳನ್ನು ಕೊಡಬೇಕೆಂದು ಹಠ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಂದೆ ಫಕೀರಪ್ಪ ಹಾರೆಯಿಂದ ಹೊಡೆದು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.