alex Certify BIG NEWS: ಇಂಟರ್ನೆಟ್​ ಸ್ಪೀಡ್​ ವಿಚಾರದಲ್ಲಿ ಹೊಸ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂಟರ್ನೆಟ್​ ಸ್ಪೀಡ್​ ವಿಚಾರದಲ್ಲಿ ಹೊಸ ವಿಶ್ವ ದಾಖಲೆ

ಇಂಟರ್ನೆಟ್​ ಬಳಕೆಯು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಈ ಕಾಲದಲ್ಲಿ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಡೇಟಾಗಳನ್ನ ವರ್ಗಾಯಿಸುವಂತೆ ಮಾಡಲು ಸಂಶೋಧಕರು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ.

ಈ ನಡುವೆ ಜಪಾನ್​ನ ಟೋಕಿಯೋದ ರಾಷ್ಟ್ರೀಯ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಸಂಸ್ಥೆಯು ಆಪ್ಟಿಕಲ್​ ಫೈಬರ್​ ಹಾಗೂ ಇಂಟರ್ನೆಟ್​ ವೇಗದ ವಿಚಾರದಲ್ಲಿ ಹೊಸ ವಿಶ್ವ ದಾಖಲೆಯನ್ನೇ ಸೃಷ್ಟಿಸಿದೆ.

ಈ ಸಂಸ್ಥೆಯು ಕೇವಲ 1 ಸೆಕೆಂಡ್​ನಲ್ಲಿ 391 ಟೆರಾಬೈಟ್​ ಗಾತ್ರವುಳ್ಳ ಡೇಟಾವನ್ನ ವರ್ಗಾಯಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ಪ್ರತಿ ಸೆಕೆಂಡ್​​ಗೆ 48,875 ಗಿಗಾಬೈಟ್ ಡೇಟಾವ​​​​​ನ್ನು ವರ್ಗಾಯಿಸಿದಂತಾಗಿದೆ.

ಭಾರತದಲ್ಲಿ ಪ್ರತಿ ಸೆಕೆಂಡ್​ಗೆ 0.012 ಗಿಗಾಬೈಟ್​ ಡೇಟಾವನ್ನ ನೀವು ವರ್ಗಾಯಿಸಬಹುದು. 2020ರಲ್ಲಿ ಲಂಡನ್​ ವಿಶ್ವವಿದ್ಯಾಲಯವು ಸೆಕೆಂಡಿಗೆ 178 ಟೆರಾಬೈಟ್​​ ಡೇಟಾವನ್ನ ವರ್ಗಾಯಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಆದರೆ ಈಗ ಜಪಾನ್​ ಇದರ ದುಪ್ಪಟ್ಟು ಡೇಟಾವನ್ನ ವರ್ಗಾವಣೆ ಮಾಡುವುದರ ಮೂಲಕ ಈ ದಾಖಲೆಯನ್ನು ಮುರಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...