ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಅನ್ ಲಾಕ್-4.0 ಜಾರಿಗೆ ಬರಲಿದ್ದು, ಲಾಕ್ ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಳೆಯಿಂದ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿಶೆಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲು ಅವಕಾಶ ನೀಡಲಾಗಿದೆ. ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದಾಗಿದೆ ಎಂದರು.
ಒಳ ಉಡುಪುಗಳನ್ನ ಆರಿಸಿಕೊಳ್ಳುವಾಗ ಮಾಡದಿರಿ ಈ 6 ತಪ್ಪು….!
ಮೂರನೇ ಅಲೆಯಲ್ಲಿ ಕೈಗೊಳ್ಳಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ ಸೂಚಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಹಾಗೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ನಾಳೆಯಿಂದ ಥಿಯೇಟರ್ ಗಳನ್ನು ತೆರೆಯಬಹುದು ಆದರೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ
ದೇವಸ್ಥಾನಗಳಲ್ಲಿ ಇದ್ದ ನಿರ್ಬಂಧ ಸಂಪೂರ್ಣ ತೆರವು
ಜುಲೈ 26ರಿಂದ ಪದವಿ ತರಗತಿಗಳು ಆರಂಭ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮೊದಲ ಡೋಸ್ ಕಡ್ಡಾಯ
ನೈಟ್ ಕರ್ಫ್ಯೂ ರಾತ್ರಿ 9ಗಂಟೆಯ ಬದಲಾಗಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿ
ಒಳಾಂಗಣ ಚಿತ್ರೀಕರಣಕ್ಕೆ ಅವಕಾಶವಿಲ್ಲ
ಮದುವೆ ಸಮಾರಂಭಗಳಿಗೆ ಹಿಂದೆ ಇದ್ದ ನಿರ್ಬಂಧ ಮುಂದುವರಿಕೆ, 100 ಜನರಿಗೆ ಅವಕಾಶ
ಅಂತ್ಯ ಸಂಸ್ಕಾಕ್ಕೆ 20 ಜನರಿಗೆ ಅವಕಾಶ
ಪಬ್, ಕ್ಲಬ್ ಗಳು ಸಧ್ಯಕ್ಕೆ ಓಪನ್ ಇಲ್ಲ
ಈಜುಕೊಳಗಳಿಗೆ ಸಧ್ಯಕ್ಕೆ ಅವಕಾಶವಿಲ್ಲ