ಸ್ಯಾಂಡಲ್ ವುಡ್ ‘ದೊಡ್ಮನೆ’ ವಿಚಾರ ತೆಗೆದಿದ್ದಕ್ಕೆ ಸಿಡಿದೆದ್ದ ನಟ ದರ್ಶನ್ ನಿರ್ಮಾಪಕ ಉಮಾಪತಿ ವಿಷಯ ಡೈವರ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಡ್ಮನೆಯಲ್ಲಿ ನಮ್ಮ ಅಪ್ಪ ಅನ್ನ ತಿಂದಿದ್ದಾರೆ. ನಾನೂ ಅಲ್ಲಿಂದಲೇ ಕೆಲಸ ಆರಂಭಿಸಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತೋಟ ಓಪನ್ ಸೀಕ್ರೇಟ್ ಆಗಿದೆ. ಇಲ್ಲಿ ಯಾರು ಏನು ಮಾಡುತ್ತಿಲ್ಲ. ನಾನು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ನನ್ನ ಅಭಿಮಾನಿಗಳಿಗೆ ಮಾತ್ರ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಉಮಾಪತಿ ದೊಡ್ಮನೆ ವಿಷಯ ತೆಗೆಯದಿದ್ದರೆ ನಾನು ಸುಮ್ಮನೆ ಇರುತ್ತಿದ್ದೆ. ದೊಡ್ಮನೆ ವಿಷಯ ಬರದಿದ್ದರೆ ನಾನು ಕೂಲ್ ಆಗಿಯೇ ಇರುತ್ತಿದ್ದೆ. ಇವತ್ತಲ್ಲ ನೂರು ವರ್ಷವಾದರೂ ದೊಡ್ಮನೆ ದೊಡ್ಮನೆಯಾಗಿರುತ್ತದೆ. ನಾವೆಲ್ಲ ಅದರ ಕೆಳಗಿನ ಹುಲ್ಲು ಕೂಡ ಅಲ್ಲ ಎಂದಿದ್ದಾರೆ. ನಾನು 10 ನೇ ತರಗತಿ ಓದಿದ್ದೇನೆ. ನೀನಾಸಂ, DFT ಚೆನ್ನೈನಲ್ಲಿ ತರಬೇತಿ ಪಡೆದಿದ್ದೇನೆ. ಕನ್ನಡ, ಹಿಂದಿ, ಇಂಗ್ಲಿಷ್ ಓದಲು ಬರೆಯಲು ಬರುತ್ತದೆ. ನಾನು ಅನ್ ಎಜುಕೇಟೆಡ್. ‘ಕುರುಕ್ಷೇತ್ರ’, ‘ಸಂಗೊಳ್ಳಿ ರಾಯಣ್ಣ’, ‘ಮೆಜೆಸ್ಟಿಕ್’ ಸಿನಿಮಾ ಮಾಡಿದ್ದೇನೆ. ಇಂದ್ರಜಿತ್ ಯೋಗ್ಯತೆ ಇದ್ರೆ ಒಂದು ಸಿನಿಮಾ ಮಾಡಲಿ. ಉಮಾಪತಿ ಪ್ರಾಪರ್ಟಿ ವಿಚಾರ ಮಾತಾಡಿದ್ದಕ್ಕೆ ಇದೆಲ್ಲಾ ಬಂದಿದ್ದು ಎಂದು ಕಿಡಿಕಾರಿದ್ದಾರೆ.