ಕೊರೊನಾ ವೈರಸ್ ಲಸಿಕೆ ಪಡೆದ ನಂತ್ರ ವೈರಸ್ ಶೆಡ್ಡಿಂಗ್ ನಿಂದ ಬೇರೆಯವರಿಗೆ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಆದ್ರೆ ತಜ್ಞರು ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಕೊರೊನಾ ಲಸಿಕೆಯಲ್ಲಿ ಜೀವಂತ ವೈರಸ್ ಇರುವುದಿಲ್ಲವೆಂದು ತಜ್ಞರು ಹೇಳಿದ್ದಾರೆ.
ಆಸ್ಟ್ರೇಲಿಯಾದ ಕೆಲ ವ್ಯಾಪಾರಿಗಳು, ಕೊರೊನಾ ಲಸಿಕೆ ಹಾಕಿಸಿಕೊಂಡ ಗ್ರಾಹಕರಿಗೆ ತಮ್ಮ ಬಳಿ ಬರದಂತೆ ಸೂಚನೆ ನೀಡಿದ್ದಾರೆ. ಲಸಿಕೆ ಇತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬುತ್ತಿದ್ದಾರೆ. ಇದು ವೈರಸ್ ಶೆಡ್ಡಿಂಗ್ ಚರ್ಚೆಗೆ ಕಾರಣವಾಗಿದೆ.
ವೈರಲ್ ಶೆಡ್ಡಿಂಗ್ ನಲ್ಲಿ ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣ ಕಾಣಿಸುವುದಿಲ್ಲ. ಆದ್ರೆ ಮಾತನಾಡುವಾಗ, ಉಸಿರಾಡುವಾಗ, ತಿನ್ನುವಾಗ ಮತ್ತು ಇತರ ಸಾಮಾನ್ಯ ದೈನಂದಿನ ಚಟುವಟಿಕೆಗಳ ಮೂಲಕ ಸೋಂಕು ಹರಡುತ್ತಾನೆ. ಆಸ್ಟ್ರೇಲಿಯಾದ ಉತ್ತರ ನ್ಯೂ ಸೌತ್ ವೇಲ್ಸ್ ನಗರ ಮುಲ್ಲುಂಬಿಂಬಿ ಮತ್ತು ಕ್ವೀನ್ಸ್ ಲ್ಯಾಂಡ್ನ ಗೋಲ್ಡ್ ಕೋಸ್ಟ್ ನಲ್ಲಿ ಇದು ಕಂಡು ಬಂದಿದೆ.
ಅಮೆರಿಕಾದ ಶಿಕ್ಷಕರೊಬ್ಬರು, ತನ್ನ ತಂದೆ-ತಾಯಿಯನ್ನು ವಿದ್ಯಾರ್ಥಿಗಳು ತಬ್ಬಿಕೊಳ್ಳಲು ಬಿಡಲಿಲ್ಲ. ತಂದೆ-ತಾಯಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆಂಬ ಕಾರಣಕ್ಕೆ ಅವರಿಂದ ವಿದ್ಯಾರ್ಥಿಗಳನ್ನು ದೂರವಿಟ್ಟಿದ್ದರು. ಆದ್ರೆ ಕೊರೊನಾ ಲಸಿಕೆಯಿಂದ ಯಾವುದೇ ವೈರಸ್ ಹರಡುವುದಿಲ್ಲ. ವೈರಸ್ ಶೆಡ್ಡಿಂಗ್ ಬಗ್ಗೆ ಭಯಬೇಡ. ಆದ್ರೆ ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರವೂ ಮಾರುಕಟ್ಟೆಯಂತಹ ಪ್ರದೇಶ ಅಥವಾ ಕೊರೊನಾ ಹೆಚ್ಚಿರುವ ಪ್ರದೇಶಕ್ಕೆ ಹೋಗುವಾಗ ಎಚ್ಚರದಿಂದಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.