ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದಿಢೀರ್ ದೆಹಲಿ ಪ್ರವಾಸ ಹಾಗೂ ವರಿಷ್ಠರ ಭೇಟಿ ಹಲವು ವದಂತಿಗಳಿಗೆ ಕಾರಣವಾಗಿದ್ದು, ಇದೀಗ ಎಲ್ಲಾ ಊಹಾಪೋಹಗಳಿಗೂ ಸಿಎಂ ಬಿ ಎಸ್ ವೈ ತೆರೆ ಎಳೆದಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ ರಾಜ್ಯ ರಾಜಕೀಯ ಬೆಳವಣಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ನವದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ನಡ್ಡಾ ನಿವಾಸಕ್ಕೆ ತೆರಳಿದ ಸಿಎಂ, ಜೆ.ಪಿ.ನಡ್ಡಾ ಅವರೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಎಂಬುದು ಕೇವಲ ವದಂತಿ. ರಾಜೀನಾಮೆ ಕೊಟ್ಟಿದ್ದರೆ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡುವಂತೆ ನನಗೆ ಯಾರೊಬ್ಬರೂ ಸೂಚಿಸಿಲ್ಲ. ವರಿಷ್ಠರ ಭೇಟಿ ವೇಳೆಯೂ ರಾಜೀನಾಮೆ ಎಂಬ ಒಂದೇ ಒಂದು ಪದ ಕೂಡ ಚರ್ಚೆಯಾಗಿಲ್ಲ ಎಂದು ಹೇಳುವ ಮುಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
HDFC ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ನಾಳೆ ಬಂದ್ ಆಗಲಿದೆ ಈ ಸೇವೆ
ನಡ್ಡಾ ಭೇಟಿ ಬೆನ್ನಲ್ಲೇ ಸಿಎಂ ಬಿ ಎಸ್ ವೈ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಗೆ ತೆರಳಿದ್ದು, ಪುತ್ರ ಬಿ.ವೈ.ವಿಜಯೇಂದ್ರ ಕೂಡ ಸಾಥ್ ನೀಡಿದ್ದಾರೆ.