ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ಡಿಎಫ್ಸಿ ಬ್ಯಾಂಕ್ ಸೇವೆಯಲ್ಲಿ ನಾಳೆ ವ್ಯತ್ಯಯವಾಗಲಿದೆ. ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಜುಲೈ 18 ರಂದು ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ ಬಂದ್ ಇರಲಿದೆ. ನಿರ್ವಹಣೆ ಕಾರಣಕ್ಕೆ ಸೇವೆ ಬಂದ್ ಆಗಲಿದೆ ಎಂದು ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ನೀಡಿದೆ. ಎಸ್ಎಂಎಸ್ ಹಾಗೂ ಇ-ಮೇಲ್ ಮೂಲಕ ಮಾಹಿತಿ ನೀಡ್ತಿದೆ.
ಗ್ರಾಹಕರನ್ನು ಬ್ಯಾಂಕ್ ಕ್ಷಮೆ ಕೋರಿದೆ. ಕೆಲವು ನಿಗದಿತ ನಿರ್ವಹಣಾ ಚಟುವಟಿಕೆಗಳಿಂದಾಗಿ, ನೆಟ್ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಜುಲೈ 18 ರಂದು ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಇ-ಮೇಲ್ ಕಳುಹಿಸಿದೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬ್ಯಾಂಕ್ ಹೇಳಿದೆ.
ಎಚ್ಡಿಎಫ್ಸಿ ಬ್ಯಾಂಕ್ ಭಾರತದಲ್ಲಿ ಬಹಳ ದೊಡ್ಡ ಖಾಸಗಿ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಅದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕೊರೊನಾ ಲಾಕ್ಡೌನ್ನಲ್ಲಿ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸಲು, ಬ್ಯಾಂಕ್ ಇತ್ತೀಚೆಗೆ 19 ನಗರಗಳ 50 ಸ್ಥಳಗಳಲ್ಲಿ ಎಟಿಎಂ ಒದಗಿಸುವ ಘೋಷಣೆ ಮಾಡಿದೆ.