ನಾಲ್ಕನೇ ಅವಧಿಗೆ ಸಿಎಂ ಆಗಿ 2 ವರ್ಷಗಳನ್ನ ಪೂರೈಸಿರುವ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನ ಭೇಟಿಯಾದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಊಹಾಪೋಹಗಳು ಕೇಳಿ ಬರ್ತಿರುವ ಬೆನ್ನಲ್ಲೇ ಸಿಎಂ ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ಸಾಕಷ್ಟು ನಾಯಕರು ದನಿ ಎತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೆ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಸಂಜೆ ಪ್ರಧಾನಿ ಮೋದಿಯನ್ನ ಭೇಟಿಯಾದ ಸಿಎಂ ಯಡಿಯೂರಪ್ಪ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು, ಇದಕ್ಕೂ ಮೊದಲು ಕೋವಿಡ್ ಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಲು ದಕ್ಷಿಣ ಭಾರತದ ಸಿಎಂಗಳ ಜೊತೆಯಲ್ಲಿ ಪ್ರಧಾನಿ ನಡೆಸಿದ ಸಭೆಯಲ್ಲಿ ಯಡಿಯೂರಪ್ಪ ಭಾಗಿಯಾಗಿದ್ರು.
ಸಭೆಯ ಬಳಿಕ ನಾಯಕತ್ವ ಬದಲಾವಣೆ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಿಎಂ ಯಡಿಯೂರಪ್ಪ, ನಾಯಕತ್ವ ಬದಲಾವಣೆ ವದಂತಿ ಕುರಿತಂತೆ ನನಗೇನೂ ತಿಳಿದಿಲ್ಲ. ಇದನ್ನ ನೀವೇ ಹೇಳಬೇಕು ಎಂದು ಹೇಳಿದ್ರು. ಅಲ್ಲದೇ ನಾಳೆ ಬೆಂಗಳೂರಿಗೆ ವಾಪಸ್ಸಾಗ್ತಿರೋದು ಇದೇ ವೇಳೆ ಮಾಹಿತಿ ನೀಡಿದ್ರು, ನಾಳೆ ಸಿಎಂ ಯಡಿಯೂರಪ್ಪ ರಕ್ಷಣಾ ಸಚಿವ ರಾಜನಾಥ್ಸಿಂಗ್ ಹಾಗೂ ಅಮಿತ್ ಶಾರನ್ನ ಭೇಟಿ ಮಾಡುವ ಸಾಧ್ಯತೆ ಇದೆ.