ಛತ್ತೀಸಗಢ: 35 ಮಂದಿ ಸೈನಿಕರಿಗೆ ಕೊರೋನಾ ಸೋಂಕು ತಗುಲಿರುವ ಘಟನೆ ನಡೆದಿದೆ. ಛತ್ತೀಸ್ ಗಢದ ರಾಜನಂದಗಾಂವ್ ನ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸೈನಿಕರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 650 ಮಂದಿ ಇಲ್ಲಿಗೆ ತರಬೇತಿಗೆ ಆಗಮಿಸಿದ್ದಾರೆ. ಇದೀಗ 35 ಮಂದಿಗೆ ಸೋಂಕು ತಗುಲಿರುವ ಕಾರಣ ಕೇಂದ್ರವನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತವು ಸೋಂಕಿಗೀಡಾದ ಸೈನಿಕರಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದೆ. ಹಾಗೂ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
‘ಆ ಫೋಟೋ’ ಇಟ್ಟುಕೊಂಡು ನನ್ನ ಹೆಸರು ತಳಕು ಹಾಕಬೇಡಿ ಎಂದ ಕುಮಾರಸ್ವಾಮಿ
ತರಬೇತಿಗೆ ಬಂದವರ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ 35 ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇನ್ನು ವರದಿ ಬಂದ ಕೂಡಲೇ ಜಿಲ್ಲಾಧಿಕಾರಿ ಇಡೀ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿದ್ದು, ಸೈನಿಕರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.
ದೇಶದಲ್ಲಿ ಕೊರೊನಾ ಮೊದಲ ಅಲೆಗಿಂತ ಕೊರೊನಾ ಎರಡನೇ ಅಲೆ ಭೀಕರ ಪರಿಸ್ಥಿತಿ ಎಬ್ಬಿಸಿತ್ತು. ಸೋಂಕಿತರ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು. ಸದ್ಯ ಕೊರೊನಾ ಸೋಂಕು ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ನಿರ್ಲಕ್ಷ್ಯ ಮಾಡಬಾರದು.