ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿವೆ.
ಇದೇ ವೇಳೆ, ಹರಿಯಾಣಾದಲ್ಲಿ 9-12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮರು ಆರಂಭಿಸಲಾಗಿದೆ. 6-8ನೇ ತರಗತಿ ಮಕ್ಕಳು ಶಾಲೆ ಮರು ಆರಂಭವಾಗಲು ಜುಲೈ 23ರ ವರೆಗೆ ಕಾಯಬೇಕಿದೆ. ಈ ಅವಧಿಯಲ್ಲಿ ಮಕ್ಕಳಲ್ಲಿ ಸಾಮಾಜಿಕ ಅಂತರದಂತ ಕಟ್ಟುನಿಟ್ಟಿನ ಕ್ರಮಗಳನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿ ಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಶಾಲೆಗಳಿಗೆ ಮರಳಿ ಬರುವುದು ಸದ್ಯದ ಮಟ್ಟಿಗೆ ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಾಗಿದ್ದು, ಅವರ ಪೋಷಕರು ಒಪ್ಪಿದಲ್ಲಿ ಮಾತ್ರವೇ ಮಕ್ಕಳು ಶಾಲೆಗಳಿಗೆ ದೈಹಿಕವಾಗಿ ಬರಲಿದ್ದಾರೆ. ಆನ್ಲೈನ್ ಕ್ಲಾಸ್‌ಗಳು ಎಂದಿನಂತೆ ಮುಂದುವರೆಯುತ್ತಿರುವ ಕಾರಣ ವಿದ್ಯಾರ್ಥಿಗಳ ದೈಹಿಕ ಹಾಜರಾತಿಯನ್ನು ಕಡ್ಡಾಯ ಮಾಡಿಲ್ಲ.
1-5ನೇ ತರಗತಿ ಮಕ್ಕಳಿಗೆ ಶಾಲೆ ಯಾವಾಗ ಆರಂಭಿಸುವುದು ಎಂಬ ಬಗ್ಗೆ ಮನೋಹರ್‌ಲಾಲ್ ಖಟ್ಟರ್ ಸರ್ಕಾರ ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ.