ಮಕ್ಕಳೆಂದರೆ ಹಾಗೆ ಕೆಲವರು ಭಾರಿ ತುಂಟ ಸ್ವಭಾವದವಾರಾಗಿತ್ತಾರೆ. ಕೆಲವೊಂದು ಮಕ್ಕಳಲ್ಲಿ ಕೋಪ, ಹಠಮಾರಿತನ ಜಾಸ್ತಿಯಿರುತ್ತದೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ನಡವಳಿಕೆ ಸರಿಮಾಡಲು ಶತಾಯಗತಾಯ ಪ್ರಯತ್ನ ಮಾಡುತ್ತಾರೆ. ಅದೂ ಸಾಧ್ಯವಾಗದಿದ್ದರೆ ಕೆಲವರು ಕಠಿಣ ಶಿಕ್ಷೆಯನ್ನೇ ಕೊಟ್ಟುಬಿಡುತ್ತಾರೆ. ಹಾಗೆಯೇ ಚೀನಾದಲ್ಲೊಂದು ಇದೇ ರೀತಿಯ ಆಶ್ಚರ್ಯಕರ, ವಿಚಿತ್ರ ಘಟನೆ ನಡೆದಿದೆ. ಅದೇನೆಂದು ತಿಳಿಯಬೇಕಾ? ಈ ಸ್ಟೋರಿ ಓದಿ.
ಹೌದು, ಭಾರಿ ತುಂಟಳಾಗಿದ್ದ 13 ವರ್ಷದ ಬಾಲಕಿಯ ಚೇಷ್ಟೆಗೆ ಬೇಸತ್ತ ಪೋಷಕರು ಆಕೆಯನ್ನು ನಿರ್ಜನ ದ್ವೀಪದಲ್ಲಿ ಬಿಟ್ಟು ಬಂದಿರುವ ಘಟನೆ ಚೀನಾದಲ್ಲಿ ನಡೆದಿದೆ. ಇದರಿಂದ ಆಕೆ ಪಳಗಲು ಸಾಧ್ಯವಿದೆ ಎಂದು ಪೋಷಕರು ಈ ರೀತಿ ಶಾಡೋಂಗ್ ನಲ್ಲಿರುವ ನಿರ್ಜನ ದ್ವೀಪದಲ್ಲಿ ಬಿಟ್ಟು ಬಂದಿದ್ದಾರೆ.
ಮದುವೆಗೆ ಬರುವ ಅತಿಥಿಗಳಿಗೆ ವಿಚಿತ್ರ ನಿರ್ಬಂಧ ವಿಧಿಸಿದ ಜೋಡಿ
ರುಷಾನ್ ನಗರಕ್ಕೆ ಕೇವಲ ಒಂದು ಕಿಲೋಮೀಟರ್ ದೂರದದಲ್ಲಿರುವ ಈ ದ್ವೀಪದಲ್ಲಿ ನೀರು, ವಿದ್ಯುತ್ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ ಇಲ್ಲಿ ಜನರೂ ಕೂಡ ವಾಸ ಮಾಡುತ್ತಿಲ್ಲ. ಬಾಲಕಿಯು ಎರಡು ದಿನಗಳ ಕಾಲ ಈ ದ್ವೀಪದಲ್ಲಿ ಕಳೆದಿದ್ದಾಳೆ. ಕೊನೆಗೆ ಮೀನುಗಾರರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಲಕಿಯನ್ನು ಮನೆಗೆ ಕರೆದೊಯ್ಯುವಂತೆ ಪೋಷಕರಿಗೆ ಪೊಲೀಸರು ಆದೇಶಿಸಿದ್ದಾರೆ.