ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಇದ್ರ ಮಧ್ಯೆ ಕೊರೊನಾ ತಲೆನೋವಿಗೆ ಕಾರಣವಾಗಿದೆ. ಬ್ಯಾಟ್ಸ್ಮೆನ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಆದ್ರೆ ಟೆಸ್ಟ್ ಸರಣಿ ಆಗಸ್ಟ್ 4ರಿಂದ ನಡೆಯಲಿದ್ದು, ಆಟಗಾರರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಾಕಷ್ಟು ಸಮಯವಿದೆ.
ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಪಂತ್ ಕ್ವಾರಂಟೈನ್ ಆಗಿದ್ದಾರೆ. ಇದ್ರ ನಂತ್ರ ಮಾಡಿದ ಎರಡೂ ಟೆಸ್ಟ್ ನ ವರದಿ ನೆಗೆಟಿವ್ ಬಂದಿದೆ. ಜುಲೈ 28ರಂದು ನಡೆಯುವ ಅಭ್ಯಾಸ ಪಂದ್ಯಕ್ಕೆ ಪಂತ್ ಲಭ್ಯರಾಗುವ ಸಾಧ್ಯತೆಯಿದೆ.
ಟೀಂ ಇಂಡಿಯಾದ ಥ್ರೋಡೌನ್ ತಜ್ಞ ದಯಾನಂದ್ ಜಾರಾನಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಇವರಿಬ್ಬರ ಸಂಪರ್ಕದಲ್ಲಿದ್ದ ಆಟಗಾರರನ್ನು ಪ್ರತ್ಯೇಕಿಸಿ ಪರೀಕ್ಷೆ ಮಾಡಲಾಗಿದೆ. ಆದ್ರೆ ಅವರೆಲ್ಲರ ಆರ್ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ ಎಂದು ಬಿಸಿಸಿಐ ಹೇಳಿದೆ. ವೃದ್ಧಿಮಾನ್ ಸಹಾ, ಅಭಿಮನ್ಯು ಈಶ್ವರನ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ವರದಿ ನಕಾರಾತ್ಮಕವಾಗಿ ಬಂದಿದ್ದರೂ ಸ್ಥಳೀಯ ಪ್ರೋಟೋಕಾಲ್ ಪ್ರಕಾರ, ಮೂವರೂ ಡರ್ಹಮ್ ಗೆ ಹೋಗಲು ಸಾಧ್ಯವಿಲ್ಲ. ಜುಲೈ 24 ರವರೆಗೆ ಕ್ಯಾರೆಂಟೈನ್ನಲ್ಲಿ ಇರಬೇಕಾಗುತ್ತದೆ.
ಟೀಮ್ ಇಂಡಿಯಾ ಜುಲೈ 20 ರಿಂದ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ರಿಷಬ್ ಪಂತ್ ಮತ್ತು ರಿದ್ಧಿಮಾನಾ ಸಹಾ ಆಡ್ತಿಲ್ಲ.