ಮಾಯಾನಗರಿ ಮುಂಬಯಿಯ ಹಲವೆಡೆ ಬುಧವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಕಾರಣ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇದೇ ವೇಳೆ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಮುಂಬಯಿಯ ಸಾಯನ್, ಬಾಂದ್ರಾ, ಅಂಧೇರಿ ಹಾಗೂ ಸಾಂಟಾಕ್ರೂಜ಼್ ಪ್ರದೇಶಗಳಲ್ಲಿ ಮಳೆ ನೀರು ಎಲ್ಲೆಡೆ ನುಗ್ಗಿದೆ. ಸಾಯನ್ ರೈಲ್ವೇ ನಿಲ್ದಾಣದಲ್ಲಿ ನೀರು ನಿಂತಿರುವ ದೃಶ್ಯಗಳು ವೈರಲ್ ಆಗಿವೆ.
ಸಾಲ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷ್ಯ
ಸಾಂಕ್ರಮಿಕ ಕಾಟದ ನಡುವೆಯೇ ಮಳೆಯ ಜೋರಿನಿಂದಾಗಿ ನೂರಾರು ಪ್ರಯಾಣಿಕರು ರೈಲ್ವೇ ನಿಲ್ದಾಣಗಳ ಶೆಲ್ಟರ್ಗಳ ಕೆಳಗೆ ಆಶ್ರಯ ಪಡೆಯುವಂತೆ ಆಗಿದೆ.
24 ಗಂಟೆಗಳ ಅವಧಿಯಲ್ಲಿ ಮುಂಬಯಿಯ ಪೂರ್ವ ಪ್ರದೇಶದಲ್ಲಿ 120.67 ಮಿಮೀ ಮಳೆಯಾದರೆ ಪಶ್ಚಿಮ ಪ್ರದೇಶದಲ್ಲಿ 127.16 ಮಿಮೀ ಮಳೆಯಾಗಿದೆ. ಇದೇ ವೇಳೆ ಸಮುದ್ರದ ಅಲೆಗಳು 4.1 ಮೀಟರ್ಗಳಷ್ಟು ಎತ್ತರಕ್ಕೆ ಬರುವ ಸಾಧ್ಯತೆ ಇದೆ ಎಂದು ಸ್ಥಳೀಯಾಡಳಿತ ಎಚ್ಚರಿಕೆ ರವಾನೆ ಮಾಡಿದೆ.