alex Certify ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗಿ ನವಜೋತ್​ ಸಿಂಗ್​ ಸಿಧು ಆಯ್ಕೆ ಬಹುತೇಕ ಫಿಕ್ಸ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗಿ ನವಜೋತ್​ ಸಿಂಗ್​ ಸಿಧು ಆಯ್ಕೆ ಬಹುತೇಕ ಫಿಕ್ಸ್​….!

ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​ ವಿರೋಧಿಗಳಲ್ಲಿ ಒಬ್ಬರಾದ ನವಜೋತ್​ ಸಿಂಗ್​ ಸಿಧುರನ್ನ ಕಾಂಗ್ರೆಸ್​ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಮುಂದಾಗಿದೆ. ಈ ಮೂಲಕ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲು ಎಐಸಿಸಿ ಪ್ಲಾನ್​ ಮಾಡಿದೆ ಎನ್ನಲಾಗಿದೆ.

ಆದರೆ ಹೈಕಮಾಂಡ್​ ನಿರ್ಧಾರದಿಂದ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನ ಈಗಾಗಲೇ ಪಕ್ಷದ ವರಿಷ್ಠರಿಗೆ ರವಾನಿಸಿರುವ ಅಮರೀಂದರ್​ ಸಿಂಗ್​, ಸಿಧು ಪಕ್ಷದ ಅಧ್ಯಕ್ಷರಾದರೆ ತಾವು ಮುಂದಿನ ವಿಧಾನಸಭಾ ಚುನಾವಣೆ ಎದುರಿಸೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್​ ರಾವತ್​ ಹಾಗೂ ಸಿಎಂ ಅಮರೀಂದರ್​ ಸಿಂಗ್​​ ನಿರಾಕರಿಸಿದ್ದಾರೆ. ಆದರೆ ಪಂಜಾಬ್​​ ಕಾಂಗ್ರೆಸ್​​​ನಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಂಡಿದೆ ಎಂಬ ವಿಚಾರ ಮಾತ್ರ ಗುಟ್ಟಾಗಿ ಉಳಿದಿಲ್ಲ.
ರಾವತ್​ ನಿನ್ನ ಸಂಜೆ 7.30ರ ಸುಮಾರಿಗೆ ಸೋನಿಯಾ ಗಾಂಧಿಯವರನ್ನ ಭೇಟಿಯಾಗಲು ಧಾವಿಸಿದ್ದಾರೆ . ಮಾತ್ರವಲ್ಲದೇ ತಾವು ಸಿಧು ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂಬ ವಿಚಾರವನ್ನ ಎಲ್ಲಿಯೂ ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

ಈ ನಡುವೆ ರಾವತ್​​​ ಕಚೇರಿಯಲ್ಲಿ ಈಗಾಗಲೇ ಸಿಧು ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಬಗ್ಗೆ ಘೋಷಣೆ ಪ್ರಕಟಿಸಲು ಅಗತ್ಯ ತಯಾರಿಯನ್ನೂ ಮಾಡಲಾಗ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನು ಈ ವಿಚಾರವಾಗಿ ಟ್ವೀಟ್​ ಮಾಡಿರುವ ಪಂಜಾಬ್​ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ರವೀನ್​​ ಟುಕ್ರಾಲ್​, ಸಿಎಂ ಅಮರೀಂದರ್​ ಸಿಂಗ್​ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾಗಿದೆ. ಅವರು ತಮ್ಮ ಸ್ಥಾನವನ್ನ ತ್ಯಜಿಸುತ್ತಿಲ್ಲ ಹಾಗೂ ಅವರಿಗೆ ತ್ಯಜಿಸುವಂತೆ ಯಾರು ಸಹ ಸೂಚನೆ ನೀಡಿಲ್ಲ. 2017ರಲ್ಲಿ ಚುನಾವಣೆಯನ್ನ ಮುನ್ನಡೆಸಿದಂತೆ 2022 ಪಂಜಾಬ್​ ವಿಧಾನಸಭಾ ಚುನಾವಣೆಯ ಮುಂದಾಳತ್ವ ಕೂಡ ಅವರೇ ಹೊರಲಿದ್ದಾರೆ. ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡೋದನ್ನ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ನಡುವೆ ಅಮರೀಂದರ್​ ಪರ ವಕ್ತಾರ ಕೂಡ ಈ ವಿಚಾರವಾಗಿ ಮಾತನಾಡಿದ್ದು ಸಿಧು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಆದರೆ ನಿಜಕ್ಕೂ ತಮಗೆ ಬೇಸರವಾಗಲಿದೆ ಎಂದು ಅಮರೀಂದರ್ ಈಗಾಗಲೇ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಒಂದು ವೇಳೆ ಈ ಬಗ್ಗೆ ಹೈಕಮಾಂಡ್​ ಅಧಿಕೃತ ಘೋಷಣೆ ಮಾಡಿದಲ್ಲಿ ಇದೊಂದು ವಿನಾಶಕಾರಿ ಹೆಜ್ಜೆಯಾಗಲಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...